Saturday, May 2, 2026
Homeಚುನಾವಣೆ 2023ʼಪೀಡೆ ತೊಲಗಿತುʼ: ಸವದಿ ಕಾಂಗ್ರೆಸ್‌ ಸೇರ್ಪಡೆಗೆ ರಮೇಶ್‌ ಜಾರಕಿಹೊಳಿ ಪ್ರತಿಕ್ರಿಯೆ

ʼಪೀಡೆ ತೊಲಗಿತುʼ: ಸವದಿ ಕಾಂಗ್ರೆಸ್‌ ಸೇರ್ಪಡೆಗೆ ರಮೇಶ್‌ ಜಾರಕಿಹೊಳಿ ಪ್ರತಿಕ್ರಿಯೆ

ಲಕ್ಷ್ಮಣ್‌ ಸವದಿ ಕಾಂಗ್ರೆಸ್‌ ಸೇರುತ್ತಿದ್ದಂತೆ ʼಪೀಡೆ ತೊಲಗಿತುʼ ಎಂದು ರಮೇಶ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. ಲಕ್ಷ್ಮಣ ಸವದಿ ಸೋತಿದ್ದರೂ ಪಕ್ಷ ಅವನನ್ನು ಉಪಮುಖ್ಯಮಂತ್ರಿ ಮಾಡಿತ್ತು. ನಿಮ್ಮನ್ನು ಬಿಟ್ಟು ಹೋಗಿದ್ದಾನೆ. ಪೀಡೆ ತೊಲಗಿತು ಎಂದು ರಮೇಶ ಜಾರಕಿಹೊಳಿ ಟೀಕಿಸಿದರು.

 ‘ನನಗೆ ಮಂತ್ರಿ ಸ್ಥಾನ ತಪ್ಪಿದ ಮೇಲೆ ನಾನು ಕಾಂಗ್ರೆಸ್‌ಗೆ ಹೋಗುತ್ತೇನೆ ಎಂಬ ಭ್ರಮೆ ಸವದಿಯಲ್ಲಿತ್ತು. ಆದರೆ, ನಾನು ಹೋಗಲಿಲ್ಲ. ಮಂತ್ರಿ ಮಾಡಿದರೂ ಅವರು ಹೊರಹೋದರು. ಒಳ್ಳೆಯದೇ ಆಯಿತು. ಒಂದೂವರೆ ವರ್ಷ ಉಪ ಮುಖ್ಯಮಂತ್ರಿ ಆಗಿದ್ದರೂ ಅಥಣಿ ಅಭಿವೃದ್ಧಿಗೆ ಏನೂ ಮಾಡ್ಲಿಲ್ಲʼ ಎಂದು ಜಾರಕಿಹೊಳಿ ಕಿಡಿ ಕಾರಿದ್ದಾರೆ.

ಕುಮಠಳ್ಳಿ ಪರ ಮತಪ್ರಚಾರ ಮಾಡಿದ ಜಾರಕಿಹೊಳಿ, “ಇಷ್ಟು ವರ್ಷ ಲಕ್ಷ್ಮಣ ಸವದಿ ಕ್ಷೇತ್ರದಲ್ಲಿದ್ದಾನೆ ಎಂದು ನಾನು ದೂರ ಇದ್ದೆ. ಆದರೆ, ಇನ್ನುಮುಂದೆ ಕ್ಷೇತ್ರದಲ್ಲೇ ಇರುತ್ತೇನೆ.   ಡಿಕೆಶಿ ಇವನನ್ನು ವಿಶೇಷ ವಿಮಾನದಲ್ಲಿ ಕರೆದುಕೊಂಡು ಹೋಗಿದ್ದಾನೆ. ಡಿಕೆಶಿ ಬಹಳ ಕುತಂತ್ರಿ. ಇಂಥವರಿಂದ ಬಚಾವಾಗಲು ನೀವು ನನಗೆ ಶಕ್ತಿ ಕೊಡಬೇಕು” ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಹೆಚ್ಚಿನ ಸುದ್ದಿ