ಧಾರವಾಡ: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಜೆಪಿ ತೊರೆದಿದ್ದರಿಂದ ಪಕ್ಷಕ್ಕೆ ಯಾವುದೇ ರೀತಿಯ ನಷ್ಟವಿಲ್ಲ ಎಂದು ಬಿಜೆಪಿ ಮುಖಂಡ ಅರವಿಂದ್ ಬೆಲ್ಲದ್ ಹೇಳಿದ್ದಾರೆ.
ಬಿಜೆಪಿಯಲ್ಲಿ ವಿವಿಧ ಹುದ್ದೆಗಳನ್ನು ಅನುಭವಿಸಿ ಈಗ ಪಕ್ಷ ತೊರೆದಿರುವುದು ಸರಿಯಲ್ಲ. ಅವರು ಬಿಜೆಪಿ ಪಕ್ಷವನ್ನು ಸಂಘಟಿಸಿದ್ದಾರೆ ಅನ್ನೋದು ನಿಜ. ಆದರೆ ಈಗ ಅವರಿಗೆ ಟಿಕೆಟ್ ನಿರಾಕರಿಸಿದ್ದಕ್ಕೆ ಪಕ್ಷವನ್ನು ಬಿಟ್ಟು ಹೋಗಿದ್ದು ಸರಿ ಅಲ್ಲ.. ಅವರು ಕಿರಿಯರಿಗೆ ಮಾರ್ಗದರ್ಶಕರಾಗಿ ಇರಬೇಕಿತ್ತು ಆದ್ರೆ ಅವರು ಕಾಂಗ್ರೆಸ್ ಸೇರುತ್ತಿರೋದು ಬೇಸರ ತಂದಿದೆ ಎಂದು ಬೆಲ್ಲದ್ ಹೇಳಿದ್ರು
ಇನ್ನು ಚುನಾವಣೆ ಹೊತ್ತಲ್ಲಿ ಶೆಟ್ಟರ್‌ರವರನ್ನು ಕಾಂಗ್ರೆಸ್ ಬಳಸಿಕೊಂಡು ನಂತರ ಮೂಲೆಗುಂಪು ಮಾಡೋದು ಖಂಡಿತ. ಜಗದೀಶ್ ಶೆಟ್ಟರ್ ಬಿಜೆಪಿ ತೊರೆದಿರುವುದು ಅವರಿಗೆ ನಷ್ಟವೇ ಹೊರತು ಪಕ್ಷಕ್ಕೆ ನಷ್ಟವೇನಿಲ್ಲ.. ಅವರು ಬಿಜೆಪಿ ತೊರೆದಿರಬಹುದು ಆದರೆ ಬಿಜೆಪಿ ಕಾರ್ಯಕರ್ತರು ಅವರೊಂದಿಗೆ ಹೋಗೋದಿಲ್ಲ ಎಂದ್ರು
