ಬೆಂಗಳೂರು: ಬಿಜೆಪಿ ತೊರೆಯುತ್ತಿರುವ ಹಲವು ನಾಯಕರು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ. ಇಂದು ಬಿಜೆಪಿಯೊಂದಿಗಿನ ನಂಟು ಕಡೆದುಕೊಂಡ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆಗಳು ಹೆಚ್ಚಿದೆ.
ಜಗದೀಶ್ ಶೆಟ್ಟರ್ ಸ್ವಾಗತಕ್ಕೆ ಕಾಂಗ್ರೆಸ್ ವೇದಿಕೆ ಸಿದ್ಧಗೊಳಿಸಿದ್ದು ಈಗಾಗಲೇ ಶೆಟ್ಟರ್ ರನ್ನು ಕರೆತರಲು ಹುಬ್ಬಳ್ಳಿಯಿಂದ ಎರಡು ಹೆಲಿಕ್ಯಾಪ್ಟರ್ ವ್ಯವಸ್ಥೆ ಮಾಡಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಪ್ತ ಯು.ಬಿ ಶೆಟ್ಟಿ ಹೆಸರಿನಲ್ಲಿ ಹೆಲಿಕ್ಯಾಫ್ಟರ್ ಬುಕಿಂಗ್ ಆಗಿದ್ದು ಮದ್ಯಾಹ್ನದ ನಂತರ ಬೆಂಗಳೂರಿಗೆ ಶೆಟ್ಟರ್ ಆಗಮಿಸುವ ಸಾಧ್ಯತೆ ಇದೆ.
ಕೋಲಾರದಲ್ಲಿ ನಡೆಯುತ್ತಿರುವ ಜೈಭಾರತ ಸಮಾವೇಶಲ್ಲಿ, ರಾಹುಲ್ ಸಮ್ಮುಖದಲ್ಲಿಯೇ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಾಗ್ತಾರೆ ಎನ್ನಲಾಗ್ತಿದೆ. ಅದಲ್ಲದೇ ಕಾಂಗ್ರೆಸ್ ಹಿರಿಯ ನಾಯಕ ಶ್ಯಾಮನೂರು ಶಿವಶಂಕರಪ್ಪ ಕೂಡಾ ಜಗದೀಶ್ ಶೆಟ್ಟರ್ ಕಾಂಗ್ರೆಸ್‌ಗೆ ಬಂದರೆ ಸ್ವಾಗತಿಸುತ್ತೇವೆ ಎಂದಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಕೂಡಾ ಶೆಟ್ಟರ್ ರವರು ಕಾಂಗ್ರೆಸ್‌ಗೆ ಬಂದರೆ ಸೂಕ್ತ ಸ್ಥಾನಮಾನ ನೀಡೋದಾಗಿ ಹೇಳಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆಶಿವಕುಮಾರ್ ಶೆಟ್ಟರ್ ಕಾಂಗ್ರೆಸ್‌ಗೆ ಬರುವುದಾದರೆ ಸ್ವಾಗತಿಸುತ್ತೇವೆ.. ಅವರ ತೀರ್ಮಾನ ಏನಿದೆಯೋ ಗೊತ್ತಿಲ್ಲ. ಒಂದು ವೇಳೆ ಕಾಂಗ್ರೆಸ್‌ಗೆ ಬಂದರೆ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಲಾಗುವುದು ಎಂದ್ರು.
