Friday, April 17, 2026
Homeದೇಶಪ್ರಧಾನಿ ಮೋದಿಯನ್ನು ಭೇಟಿ ಮಾಡಿದ ಆಪಲ್ ಸಿಇಒ ಟಿಮ್ ಕುಕ್

ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ ಆಪಲ್ ಸಿಇಒ ಟಿಮ್ ಕುಕ್

 

ನವದೆಹಲಿ: ಮೊನ್ನೆಯಷ್ಟೇ ಮುಂಬೈಯಲ್ಲಿ ದೇಶದ ಮೊತ್ತಮೊದಲ ಆಪಲ್ ಶೋರೂಂ ಉದ್ಘಾಟನೆಯಾದ ಮೇಲೆ ಇಂದು ಆಪಲ್ ಸಿಇಒ ಟಿಮ್ ಕುಕ್ ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದಾರೆ.

ಸಕಾರಾತ್ಮಕ ‍ಪರಿಣಾಮಗಳಿರುವ ತಂತ್ರಜ್ಞಾನಗಳ ಬಗ್ಗೆ ಆಪಲ್ ಸಂಸ್ಥೆ ಆಸಕ್ತಿ ಹೊಂದಿದ್ದು, ಭಾರತದಾದ್ಯಂತ ಹೂಡಿಕೆ ಮಾಡಲು ಬದ್ಧವಾಗಿದೆ ಎಂದು ಟಿಮ್ ಕುಕ್ ಹೇಳಿದ್ದಾರೆ ಎನ್ನಲಾಗಿದೆ.

ದೆಹಲಿಯಲ್ಲಿ ಆಪಲ್‌ನ ಎರಡನೇ ಸ್ಟೋರ್ ಲಾಂಚ್‌ಗೆ ಮುಂಚಿತವಾಗಿ ಪ್ರಧಾನಿ ಮತ್ತು ಟಿಮ್ ಕುಕ್ ಭೇಟಿ ನಡೆದಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ‘‘ಟಿಮ್ ಕುಕ್ ನಿಮ್ಮನ್ನು ಭೇಟಿಯಾಗಿ ಸಂತೋಷವಾಗಿದೆ. ಈ ಭೇಟಿಯಲ್ಲಿ ವೈವಿಧ್ಯಮಯ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದು ಖುಷಿಯಾಗಿದೆ’’ ಎಂದಿದ್ದಾರೆ.

ಹೆಚ್ಚಿನ ಸುದ್ದಿ