Tuesday, August 4, 2026
Homeರಾಜ್ಯಜು. 26ರಂದು ಡಾಕ್ಟರ್ಸ್ ಡೇ, ಪತ್ರಿಕೋದ್ಯಮ ದಿನ ಹಾಗೂ ಕಾರ್ಗಿಲ್ ವಿಜಯ್ ದಿವಸ್ ಪೋಸ್ಟರ್ ಬಿಡುಗಡೆ

ಜು. 26ರಂದು ಡಾಕ್ಟರ್ಸ್ ಡೇ, ಪತ್ರಿಕೋದ್ಯಮ ದಿನ ಹಾಗೂ ಕಾರ್ಗಿಲ್ ವಿಜಯ್ ದಿವಸ್ ಪೋಸ್ಟರ್ ಬಿಡುಗಡೆ

ಜು. 26ರಂದು ಡಾಕ್ಟರ್ಸ್ ಡೇ, ಪತ್ರಿಕೋದ್ಯಮ ದಿನ ಹಾಗೂ ಕಾರ್ಗಿಲ್ ವಿಜಯ್ ದಿವಸ್ ಪೋಸ್ಟರ್ ಬಿಡುಗಡೆ

ಬೆಂಗಳೂರು, ಜು. 22: ಇದು ನಿಮ್ಮ ವಾಹಿನಿ ಕಲಾ ವೇದಿಕೆ (ರಿ.) ಹಾಗೂ ಸುವರ್ಣ ಕರ್ನಾಟಕ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ಸಹಯೋಗದಲ್ಲಿ ಡಾಕ್ಟರ್ಸ್ ಡೇ, ಪತ್ರಿಕೋದ್ಯಮ ದಿನ ಹಾಗೂ ಕಾರ್ಗಿಲ್ ವಿಜಯ್ ದಿವಸ್ 27ಕ್ಕೂ ಹೆಚ್ಚು 27ಕ್ಕೂ ಸಾಧಕರಿಗೆ ಗೌರವಿಸಲಾಗುವದು,ಇದೇ ಜುಲೈ 26, 2026ರಂದು ನಗರದ ನಯನ ಸಭಾಂಗಣದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮದ ಕುರಿತು ಇಂದು ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಯಿತು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯೋಜಕರು, ವೈದ್ಯರು, ಪತ್ರಕರ್ತರು ಹಾಗೂ ಕಾರ್ಗಿಲ್ ಯುದ್ಧದ ವೀರ ಯೋಧರ ಸೇವೆಯನ್ನು ಸ್ಮರಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಗಣ್ಯರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಇದು ನಿಮ್ಮ ವಾಹಿನಿ ಕಲಾ ವೇದಿಕೆ (ರಿ.) ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್ ಕೆ.ಎಸ್., ಸುವರ್ಣ ಕರ್ನಾಟಕ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ, ಚಂದ್ರಿಕಾ ಬಿ.ವಿ., ಎಚ್.ಎ. ನಾಗರತ್ನಮ್ಮ, ಕೆ. ಸುರೇಶ್ ಸೇರಿದಂತೆ ಪ್ರಮುಖ ಪದಾಧಿಕಾರಿಗಳು ಹಾಗೂ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.
ಸಾರ್ವಜನಿಕರು ಹಾಗೂ ಪತ್ರಿಕಾ ಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಯೋಜಕರು ಮನವಿ ಮಾಡಿದರು.

ಹೆಚ್ಚಿನ ಸುದ್ದಿ