Saturday, August 8, 2026
Homeಜಿಲ್ಲಾ ಸುದ್ದಿಗಳುಸೋಮೊಟೊ ಪ್ರಕರಣ ಮುದ್ದೇಬಿಹಾಳ ಪುರಸಭೆಗೆ ಲೋಕಾಯುಕ್ತ ತಂಡ ಭೇಟಿ...!!

ಸೋಮೊಟೊ ಪ್ರಕರಣ ಮುದ್ದೇಬಿಹಾಳ ಪುರಸಭೆಗೆ ಲೋಕಾಯುಕ್ತ ತಂಡ ಭೇಟಿ…!!

ಮುದ್ದೇಬಿಹಾಳ, ಆ. 7:

ಸೋಮೊಟೊ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ಸಂಗ್ರಹಿಸಲು ಲೋಕಾಯುಕ್ತ ಸಿಪಿಐ ಆನಂದ ಟಕ್ಕಣ್ಣವರ ನೇತೃತ್ವದ ತಂಡವು ಶುಕ್ರವಾರ ಮುದ್ದೇಬಿಹಾಳ ಪುರಸಭೆ ಕಚೇರಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿತು.

ಪಟ್ಟಣದಲ್ಲಿ ಸ್ವಚ್ಛತಾ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಆರೋಪ ಸೇರಿದಂತೆ ವಿವಿಧ ಸಾರ್ವಜನಿಕ ಸಮಸ್ಯೆಗಳ ಕುರಿತು ದಾಖಲಾಗಿರುವ ಸೋಮೊಟೊ ಪ್ರಕರಣದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಪುರಸಭೆಯ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಹಾಗೂ ಅಗತ್ಯ ದಾಖಲೆಗಳನ್ನು ಪಡೆದುಕೊಂಡರು ಎಂದು ಪುರಸಭೆ ಮೂಲಗಳು ತಿಳಿಸಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿಯನ್ನು ಸಂಗ್ರಹಿಸಿ ತನಿಖೆ ಮುಂದುವರಿಸಲಾಗುವುದು ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಲೋಕಾಯುಕ್ತ ಇಲಾಖೆಯ ಎಸ್ಐ ಸೇರಿದಂತೆ ಇಲಾಖೆಯ ಅಧಿಕಾರಿಗಳ ತಂಡ ಉಪಸ್ಥಿತರಿತ್ತು.

ಹೆಚ್ಚಿನ ಸುದ್ದಿ