Saturday, June 13, 2026
Homeರಾಜ್ಯಕಾಂಗ್ರೆಸ್ ಪಕ್ಷದಲ್ಲಿ ನಿಷ್ಠೆಗೆ ಹಾಗೂ ಹಿರಿತನಕ್ಕೆ ಮೋಸವಾಗುವುದಿಲ್ಲಾ ಎಂಬ ನಂಬಿಕೆ ನನಗಿದೆ: ಹಿರಿಯ ಶಾಸಕ ಅಪ್ಪಾಜಿ...

ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠೆಗೆ ಹಾಗೂ ಹಿರಿತನಕ್ಕೆ ಮೋಸವಾಗುವುದಿಲ್ಲಾ ಎಂಬ ನಂಬಿಕೆ ನನಗಿದೆ: ಹಿರಿಯ ಶಾಸಕ ಅಪ್ಪಾಜಿ ನಾಡಗೌಡ

ಮುದ್ದೇಬಿಹಾಳ:
“ನಾನು ಈಗಾಗಲೇ ಮಂತ್ರಿಸ್ಥಾನದಲ್ಲಿಯೇ ಇದ್ದೇನೆ. ಜನರ ಹಂಬಲದಂತೆ ನಮ್ಮ ಪಕ್ಷದಲ್ಲಿ ಅಧಿಕಾರ ನೀಡುವುದು ವಾಡಿಕೆಯಲ್ಲಿದೆ. ಅದನ್ನೆ ನಮ್ಮ ಹೈಕಮಾಂಡನವರು ಮುಂದೆವರೆಸುತ್ತಾರೆ ಎಂಬುವುದು ನನ್ನ ಭರವಸೆ. ಆದ್ದರಿಂದ ನಾನು ಮಂತ್ರಿಯಾಗಿದ್ದೇನೆ” ಇದು ಹಿರಿಯ ಶಾಸಕ ಅಪ್ಪಾಜಿ ಸಿ.ಎಸ್.ನಾಡಗೌಡ ಅವರ ಆಶಾಭಾವನೆಯ ಮಾತುಗಳು.


ಉತ್ತರ ಕರ್ನಾಟಕದಲ್ಲಿ ಕಾಂಗ್ರೇಸ್ ಪಕ್ಷದಲ್ಲಿ ಎಚ್.ಕೆ.ಪಾಟೀಲ ಅವರ ನಂತರ ಪಕ್ಷದ ಜಬಾವ್ದಾರಿಯನ್ನು ಹೊತ್ತು ಸಂಘಟಿಸುವಲ್ಲಿ, ಪಕ್ಷಕ್ಕೆ ಕಾರ್ಯಕರ್ತರನ್ನು ಸೇರ್ಪಡಿಸುವಲ್ಲಾಗಲಿ ಪಕ್ಷದ ಎಲ್ಲ ಚಟುವಟಿಕೆಗಳಲ್ಲಿಯೂ ಮುಂಚುಣಿಯಲ್ಲಿ ನಿಂತು ಮಾಡಿದವರು ಯಾರು ಎಂಬುವುದು ಜನತೆಗೆ ಗೊತ್ತಿದೆ. ಇವೆಲ್ಲ ವಿಷಯವನ್ನು ಕಾಂಗ್ರೇಸ್ ಪಕ್ಷದ ಹೈಕಮಾಂಡ ಗಣನೆಗೆ ತೆಗೆದುಕೊಂಡು ಸೂಕ್ತ ಸ್ಥಾನಮಾನ ನೀಡುತ್ತದೆ ಎಂಬ ಭರವಸೆ ನನ್ನಲ್ಲಿದೆ ಎಂದು ಶಾಸಕ ಅಪ್ಪಾಜಿ ಸಿ.ಎಸ್.ನಾಡಗೌಡ ಅವರ ಮಾತು.


ದೊಡ್ಡ ಸಮುದಾಯಕ್ಕೆ ಸೇರಿದವರನ್ನು ತುಳಿಯುವ ಷಡ್ಯಂತ್ರ:
ವಿಜಯಪುರ ಜಿಲ್ಲೆಯಲ್ಲಿ ಕಾಂಗ್ರೇಸ್ ಪಕ್ಷದ ಪರವಾಗಿ ಹಾಗೂ ನಿಷ್ಠೂರವಾಗಿರುವವರು ಯಾರು ಎಂಬುವುದು ನಮ್ಮ ಜಿಲ್ಲೆಯ ಜನತೆಗೆ ಗೊತ್ತಿದೆ. ನನ್ನ ಹಿಂದಿನ ಚುನಾವಣೆಯಲ್ಲಿ ಸ್ವಪಕ್ಷದವರೇ ನನ್ನ ವಿರುದ್ಧವಾಗಿ ಚುನಾವಣೆ ಮಾಡಿದ್ದು ಎಲ್ಲರಿಗೂ ಗೊತ್ತಿದೆ. ನಾನು ಒಳ್ಳೆಯದನ್ನು ಬಯಸಿದ ವ್ಯಕ್ತಿಗಳೇ ನನ್ನನ್ನು ವಿರೋಧಿಸುವ ಹಂತಕ್ಕೆ ಬಂದರೆ ನನಗೂ ಬೇಸರವಾಗುತ್ತದೆ ಎಂದು ಶಾಸಕ ನಾಡಗೌಡ ಹೇಳಿದ್ದಾರೆ.
ಸಚಿವಗಿರಿಯ ನಂಬಿಕೆ:
ನನಗೆ ಹಿಂದಿನ ಸಿಎಂ ಎಸ್.ಎಂ.ಕೃಷ್ಣ, ದರಂಸಿAಗ್ ಹಾಗೂ ಸಿದ್ರಾಮಯ್ಯನವರು ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದರು. ಆದರೆ ಪಕ್ಷದ ಕೆಲ ನಿಲುವಿಗೆ ಹಾಗೂ ಓರ್ವ ವ್ಯಕ್ತಿಯ ಬೆಳವಣಿಗೆಗೋಸ್ಕರ ನಾನು ಪಟ್ಟು ಹಿಡಿಯುವ ಕಾರ್ಯ ಮಾಡಿಲ್ಲ. ನನಗೆ ಸಚಿವ ಸಂಪುಟದ ಎರಡನೇ ಲಿಸ್ಟ್ನಲ್ಲಿ ನನಗೆ ಸ್ಥಾನ ನೀಡುತ್ತಾರೆ ಎಂಬುವುದು ನನ್ನ ಪಕ್ಷದ ಮೇಲೆ ಹಾಗೂ ಹೈಕಮಾಂಡ ಮೇಲೆ ಅತೀವ ನಂಬಿಕೆ ಇದೆ ಎಂದು ಅವರು ಹೇಳಿದ್ದಾರೆ.
ಸೂಟ್‌ಕೇಸ್ ಸುಳ್ಳ ಸುದ್ದಿ:
ಸೂಟ್‌ಕೇಸ್ ನೀಡಿದರೆ ಸ್ಥಾನಮಾನ ದೊರಕುತ್ತದೆ ಎಂಬುವುದು ಯಾವುದೇ ರಾಜಕೀಯ ಪಕ್ಷದಲ್ಲಿಯೂ ಇಲ್ಲ. ಇದೆಲ್ಲ ಅತ್ಯಕ್ಕೆ ದೂರದ ಮಾತುಗಳು ಎಮದು ಶಾಸಕ ಅಪ್ಪಾಜಿ ನಾಡಗೌಡ ಸ್ಪಷ್ಠಪಡಿಸಿದ್ದಾರೆ.

“ನಮ್ಮ ಶಾಸಕ ಅಪ್ಪಾಜಿ ನಾಡಗೌಡ ಅವರು ವಿಷ ಎರೆದವರಿಗೂ ಹಾಲೆರವ ಮನಸ್ಥಿತಿ ಉಳ್ಳವರು. ಜಿಲ್ಲೆಯ ಕಾಣದ ಕೈಗಳ ಸ್ವಪಕ್ಷದ ಕೆಲ ನಾಯಕರಿಂದಲೇ ಪ್ರತಿ ಬಾರಿಯೂ ಸಚಿವಸ್ಥಾನ ವಂಚಿತರನ್ನಾಗಿಸುವAತೆ ಕುತಂತ್ರ ನಡೆದಿದೆ. ವಿಜಯಪುರ ಜಿಲ್ಲೆಯಲ್ಲಿ ಯಾರು ಕಾಂಗ್ರೇಸ್ ಪಕ್ಷದ ನಿಷ್ಠಾವಂತರಿದ್ದಾರೆ ಎನ್ನುವುದನ್ನು ಪಕ್ಷದ ಹೈಕಮಾಂಡ ತಿಳಿದುಕೊಳ್ಳಬೇಕಿದೆ.”
-ಶರಣು ಚಲವಾದಿ, ಕಾಂಗ್ರೇಸ್ ಪಕ್ಷದ ಯುವ ಕಾರ್ಯಕರ್ತ, ಮುದ್ದೇಬಿಹಾಳ.

ಹೆಚ್ಚಿನ ಸುದ್ದಿ