Friday, April 17, 2026
HomeUncategorizedಗದಗ ವಾಣಿ ದಿನಪತ್ರಿಕೆಯಿಂದ ಮಾನ್ಯ ಸಚಿವ ಎಚ್ ಕೆ ಪಾಟೀಲ್ ಅವರಿಗೆ ನೆನಪಿನ ಕಾಣಿಕೆ ಕೊಡುಗೆ

ಗದಗ ವಾಣಿ ದಿನಪತ್ರಿಕೆಯಿಂದ ಮಾನ್ಯ ಸಚಿವ ಎಚ್ ಕೆ ಪಾಟೀಲ್ ಅವರಿಗೆ ನೆನಪಿನ ಕಾಣಿಕೆ ಕೊಡುಗೆ

ಗದಗ ವಾಣಿ ದಿನಪತ್ರಿಕೆಯ ವತಿಯಿಂದ ಮಾನ್ಯ ಶ್ರೀ. ಎಚ್ ಕೆ ಪಾಟೀಲ್, ಉಸ್ತುವಾರಿ ಸಚಿವರು ಮಾನ್ಯ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರ 78 ನೇ ಜನ್ಮದಿನದ ಪ್ರಯುಕ್ತ ದಿನಪತ್ರಿಕೆಯಲ್ಲಿ ವಿಶೇಷ ಲೇಖನದೊಂದಿಗೆ ಮಾನ್ಯ ಸಚಿವರಿಗೆ ಶುಭಾಶಯಗಳನ್ನು ಹೇಳಲಾಗಿತ್ತು. ಇಂದು ದಿನಪತ್ರಿಕೆಯ ಸಂಪಾದಕರಾದ ಮಂಜುನಾಥ್ ರಾಥೋಡ್ ಅವರು ಮಾನ್ಯ ಸಚಿವರಿಗೆ ಭೇಟಿಯಾಗಿ ಜನ್ಮದಿನೋತ್ಸವದ ವಿಶೇಷ ಲೇಖನದ ಪ್ರತಿಯನ್ನು ಫೋಟೋ ಫ್ರೇಮ್ ಮಾಡುವುದರ ಮೂಲಕವಾಗಿ ನೆನಪಿನ ಉಡುಗೊರೆಯನ್ನು ಕೊಡಲಾಯಿತು ಅಲ್ಲದೆ ಮಾನ್ಯ ಸಚಿವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಸಚಿವ ಎಚ್ ಕೆ ಪಾಟೀಲ್ ಅವರು ನಿಮ್ಮ ನೆನಪಿನ ಕಾಣಿಕೆ ನಾನು ಆಭಾರಿಯಾಗಿದ್ದೇನೆ ದಿನಪತ್ರಿಕೆಯ ಕಾರ್ಯವನ್ನು ಮೆಚ್ಚಿ ಹೊಗಳಿಕೆ ಸಲ್ಲಿಸುವುದರ ಮೂಲಕ ದಿನಪತ್ರಿಕೆ ಬೆಳೆಯಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಸಂಪಾದಕರಾದ ಮಂಜುನಾಥ್ ರಾಥೋಡ್ ಹಾಗೂ ಜಿಲ್ಲಾ ತಾಲೂಕು ವರದಿಗಾರರು ಸೇರಿದಂತೆ ಹಲವರು ಉಪಸ್ಥಿತರಿದ್ದರು

ವರದಿ: ಯಮನೂರಪ್ಪ ಆರ್ ಅಬ್ಬಿಗೇರಿ

ಹೆಚ್ಚಿನ ಸುದ್ದಿ