Monday, March 2, 2026
HomeUncategorizedಅಪ್ಪನನ್ನು ಮರೆತಿರುವ ಬಿಜೆಪಿಗೆ ಆತ್ಮಾವಲೋಕನ ಅಗತ್ಯ: ಅನಂತಕುಮಾರ್ ಪುತ್ರಿ ಟೀಕೆ

ಅಪ್ಪನನ್ನು ಮರೆತಿರುವ ಬಿಜೆಪಿಗೆ ಆತ್ಮಾವಲೋಕನ ಅಗತ್ಯ: ಅನಂತಕುಮಾರ್ ಪುತ್ರಿ ಟೀಕೆ

ರಾಜ್ಯ ರಾಜಧಾನಿಯಲ್ಲಿ ನಟರ ಹೆಸರುಗಳನ್ನು ರಸ್ತೆಗೆ ಇಡುವ ಟ್ರೆಂಡ್‌ ಶುರುವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಹಿರಿಯ ನಾಯಕ ದಿವಂಗತ ಅನಂತ್‌ ಕುಮಾರ್‌ ಪುತ್ರಿ ವಿಜೇತಾ ಅನಂತ್‌ ಕುಮಾರ್‌ ತಮ್ಮ ನೋವನ್ನು ಹೊರ ಹಾಕಿದ್ದಾರೆ.

ಪಕ್ಷವನ್ನು ಕಟ್ಟಿ ಬೆಳೆಸಿದ ನನ್ನ ಅಪ್ಪನನ್ನು ಮರೆತಿರಾ ಎಂದು ವಿಜೇತಾ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.

“ಅಪ್ಪಾ 1987ರಲ್ಲಿ ಔಪಚಾರಿಕವಾಗಿ ಬಿಜೆಪಿ ಸೇರಿದರು, ತಮ್ಮ ಕೊನೆಯ ಉಸಿರು ಇರುವವರೆಗೂ ಬಿಜೆಪಿಗಾಗಿ ದುಡಿದಿದ್ದಾರೆ. ಉದ್ಘಾಟನಾ ಕಾರ್ಯಕ್ರಮಗಳು, ರಸ್ತೆಗಳು, ರೈಲು ಮಾರ್ಗಗಳಲ್ಲಿ ಅವರ ಹೆಸರಿಡುವ ಮೂಲಕ ಅವರ ಕೊಡುಗೆಗಳನ್ನು ಗುರುತಿಸದಿರುವುದು ಸಣ್ಣತನವಾಗಿದೆ. ಅವರು ಲಕ್ಷಾಂತರ ಜನರ ಹೃದಯದಲ್ಲಿ ಜೀವಂತವಾಗಿದ್ದಾರೆ. ಅವರನ್ನು ಮರೆಯುತ್ತಿರುವ ಪಕ್ಷಕ್ಕೆ ಆತ್ಮಾವಲೋಕನ ಅಗತ್ಯ” ಎಂದು ವಿಜೇತಾ ಟ್ವೀಟ್‌ ಮಾಡಿದ್ದಾರೆ.

ಅಂಬರೀಷ್‌, ಪುನೀತ್‌ ರಾಜ್‌ಕುಮಾರ್‌ ಹಾಗೂ ವಜ್ರಮುನಿಯಂತಹ ನಟರ ಹೆಸರುಗಳನ್ನು ಬೆಂಗಳೂರಿನ ವಿವಿಧ ದೊಡ್ಡ ದೊಡ್ಡ ರಸ್ತೆಗಳಿಗೆ ಸರ್ಕಾರವು ನಾಮಕರಣ ಮಾಡಿತ್ತು. ರೇಸ್‌ಕೊರ್ಸ್‌ ರಸ್ತೆಗೆ ಅಂಬರೀಷ್‌ ಹೆಸರನ್ನು ಇಟ್ಟರೆ, 12 ಕಿಮೀ ಉದ್ದದ ಔಟರ್‌ ರಿಂಗ್‌ ರೋಡಿಗೆ ಪುನೀತ್‌ ಹೆಸರನ್ನು ಇಡಲಾಗಿದೆ.

ಹೆಚ್ಚಿನ ಸುದ್ದಿ