ಎಸೆಸೆಲ್ಸಿ ಪರೀಕ್ಷೆಯ ಮೊದಲ ದಿನವೇ ವಿದ್ಯಾರ್ಥಿಗಳಿಗೆ ಆಘಾತಕಾರಿ ಸುದ್ದಿ ಹೊರಬಿದ್ದದೆ. ಇಂದಿನ ಪರೀಕ್ಷಾ ವಿಷಯವಾದ ಕನ್ನಡ ಭಾಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದಾಗಿ ವದಂತಿ ಎಲ್ಲೆಡೆ ಹರಿದಾಡುತ್ತಿದೆ. ಈ ಬಗ್ಗೆ ಪೋಷಕರು ಮತ್ತು ವಿದ್ಯಾರ್ಥಿಗಳು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಪರೀಕ್ಷೆ ಆರಂಭಗೊಂಡ ಕೆಲವೇ ಸಮದಯಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಕನ್ನಡ ಪ್ರಶ್ನೆಪತ್ರಿಕೆ ವಾಟ್ಸಾಪ್ ಮೂಲಕ ಹರಿದಾಡಿದೆ. ಇದು ಕಿಡಿಗೇಡಿಗಳ ಕೃತ್ಯವೂ ಇರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ತನಿಖೆ ಪ್ರಾರಂಭವಾಗಿದೆ. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿ ನಿಗದಿತ ಸಮಯಕ್ಕಿಂತ ಅರ್ಧ ತಾಸು ತಡವಾಗಿ ಬರಬಹುದು. ಮತ್ತು ಪರೀಕ್ಷೆಗೆ ಹಾಜರಾದ ಮೇಲೆ ಕನಿಷ್ಠ ಅರ್ಧ ತಾಸು ಪರೀಕ್ಷಾ ಕೇಂದ್ರದಲ್ಲೇ ಕಳೆಯಬೇಕು ಎಂಬ ನಿಯಮವಿದೆ. ಪರೀಕ್ಷಾ ಕೇಂದ್ರದಿಂದ ಮೊತ್ತಮೊದಲು ಹೊರಬಿದ್ದ ವಿದ್ಯಾರ್ಥಿಯಿಂದ ಪ್ರಶ್ನೆಪತ್ರಿಕೆ ಪಡೆದು ಅದನ್ನು ಸೋರಿಕೆ ಮಾಡಿರುವ ಸಂಭವವೂ ಇಲ್ಲದಿಲ್ಲ.
