ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಿದ ನಂತರ ‘ಗುಜರಾತ್ ಮಾಡೆಲ್’ ತಂತ್ರದ ಚರ್ಚೆ ಮುನ್ನೆಲೆಗೆ ಬಂದಿದೆ. ಕಳೆದ ಬಾರಿ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಹೊಸ ಪ್ಲ್ಯಾನ್ ಮಾಡಿ ಗೆಲುವು ಸಾಧಿಸಿದ ಬಿಜೆಪಿ ಈ ಬಾರಿ ಕರ್ನಾಟಕದಲ್ಲೂ ಅದೇ ಪ್ರಯೋಗಕ್ಕೆ ಮುಂದಾಗಿದೆ.
ಏನಿದು ಗುಜರಾತ್ ಮಾಡೆಲ್?
ಯಾವುದೇ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇದ್ದರೆ ಅಂತಹ ರಾಜ್ಯಗಳಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ಕೊಡದೆ ಹೊಸ ಮುಖಗಳಿಗೆ ಟಿಕೆಟ್ ನೀಡುವ ಬಿಜೆಪಿ ತಂತ್ರವೇ ಗುಜರಾತ್ ಮಾಡೆಲ್.
2022ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಗುಜರಾತ್ ನಲ್ಲಿ 40 ಕ್ಷೇತ್ರಗಳಲ್ಲಿ ಹಳಬರನ್ನು ಮನಗೆ ಕಳಿಸಿ ಹೊಸಬರಿಗೆ ವಕಾಶ ಕೊಟ್ಟು ಈ ಪ್ರಯತ್ನದಲ್ಲಿ ಯಶಸ್ವಿಯಾಗಿತ್ತು.ಆ ಚುನಾವಣೆಯಲ್ಲಿ ಒಟ್ಟು105 ಹೊಸಮುಖಗಳು ವಿಧಾನಸಭೆಯನ್ನು ಪ್ರವೇಶಿಸಿದ್ದರು.
ಚುನಾವಣೆಯಲ್ಲಿ 14 ಮಹಿಳೆಯರಿಗೆ ಅವಕಾಶ ನೀಡಿ ಅದರಲ್ಲಿ 13 ಮಂದಿ ಬಿಜೆಪಿ ಗೆಲ್ಲಿಸಿಕೊಂಡಿತ್ತು. ಇವರಲ್ಲಿ ನರೋಡಾದಿಂದ ಸ್ಪರ್ಧಿಸಿ ಗೆದ್ದಿದ್ದ ಡಾ.ಪಾಯಲ್ ಕುಲಕರ್ಣಿಯವರಿಗೆ ರಾಜಕೀಯದ ಯಾವ ಅನುಭವವೂ ಇರಲಿಲ್ಲ. ವೈದ್ಯೆಯಾಗಿದ್ದ ಇವರು ಬಿಜೆಪಿಯಿಂದ ಸ್ಪರ್ಧಿಸಿ 1 ಲಕ್ಷಕ್ಕೂ ಅಧಿಕ ಮತಗಳಿಂದ ಗೆದ್ದಿದ್ದರು.
ಇನ್ನು ಎಲ್ಲರನ್ನೂ ಆಶ್ಚರ್ಯಕ್ಕೀಡು ಮಾಡಿದ ನಡೆಯಲ್ಲಿ ಸಿಎಂ ವಿಜಯ್ ರೂಪಾನಿ, ಮಾಜಿ ಉಪಮುಖ್ಯಮಂತ್ರಿ ನಿತಿನ್ ಪಟೇಲ್, ಮಾಜಿ ಗೃಹಸಚಿವ ಪ್ರದೀಪ್ ಸಿಂಗ್ ಜಡೇಜ, ಮಾಜಿ ಕಂದಾಯ ಸಚಿವ ಕೌಶಿಕ್ ಭಾಯ್ ಪಟೇಲ್ ಮೊದಲಾದ ಘಟಾನುಘಟಿಗಳಿಗೆ ಟಿಕೆಟ್ ನಿರಾಕರಿಸಲಾಗಿತ್ತು.
ಗುಜರಾತ್‌ನಲ್ಲಿ ಹೊಸ ಪ್ರಯೋಗಕ್ಕೆ ಕೈ ಹಾಕಿ ಸೈ ಎನಿಸಿಕೊಂಡ ಬಿಜೆಪಿ ಕರ್ನಾಟಕಲ್ಲಿ ಗುಜರಾತ್ ಮಾಡೆಲ್ ಅನುಸರಿಸಲು ಮುಂದಾಗಿದ್ದು ರಾಜ್ಯದಲ್ಲಿ ಈ ಮಾಡೆಲ್ ಹೇಗೆ ವರ್ಕ್‌ಔಟ್ ಆಗುತ್ತೆ ಎಂಬ ಕುತೂಹಲವಿದೆ
