Monday, March 2, 2026
Homeಚುನಾವಣೆ 2023ತೀರ್ಥಹಳ್ಳಿಯಲ್ಲಿ ಕಿಮ್ಮನೆ, ಆರ್‌ಎಂಎಂ ಒಗ್ಗಟ್ಟು: ಆರಗಗೆ ಆತಂಕ

ತೀರ್ಥಹಳ್ಳಿಯಲ್ಲಿ ಕಿಮ್ಮನೆ, ಆರ್‌ಎಂಎಂ ಒಗ್ಗಟ್ಟು: ಆರಗಗೆ ಆತಂಕ

ತೀರ್ಥಹಳ್ಳಿ: ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ರಾಜಕೀಯ ಭವಿಷ್ಯ ತೂಗುಗತ್ತಿ ಮೇಲೆ ನಿಂತಿದೆ. ತೀರ್ಥಹಳ್ಳಿಯ ಇಬ್ಬರು ಕಾಂಗ್ರೆಸ್‌ ನಾಯಕರು ಒಂದಾಗಿರುವುದರಿಂದ ಆರಗ ತಮ್ಮ ಗೆಲುವಿನ ಬಗ್ಗೆ ಚಿಂತಿಸುವಂತೆ ಮಾಡಿದೆ. ಸದಾ ಹಾವು ಮುಂಗುಸಿಯಂತೆ ಇದ್ದ ಕಾಂಗ್ರೆಸ್‌ನ ಕಿಮ್ಮನೆ ರತ್ನಾಕರ್‌ ಮತ್ತು ಆರ್‌.ಎಂ. ಮಂಜುನಾಥಗೌಡ ಇಬ್ಬರೂ ಒಟ್ಟಾಗಿ ಕೆಲಸ ಮಾಡಲು ಮುಂದಾಗಿದ್ದಾರೆ,

ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್‌ ಗೆಲ್ಲಬೇಕು. ಕೋಮುವಾದಿಗಳನ್ನು ಸೋಲಿಸಬೇಕು ಎಂಬ ಉದ್ದೇಶ ಇಟ್ಟುಕೊಂಡು ಇಬ್ಬರು ಹಿರಿಯ ನಾಯಕರು ಒಂದಾಗಿದ್ದಾರೆ ಎನ್ನಲಾಗಿದೆ. ಕಿಮ್ಮನೆ ರತ್ನಾಕರ್‌ ಇದೇ ಕೊನೆಯ ಬಾರಿ ಸ್ಪರ್ಧಿಸುವುದಾಗಿ ಘೋಷಿಸಿದ್ದು, ರತ್ನಾಕರ್‌ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮ ವಹಿಸುವುದಾಗಿ ಆರ್‌ ಎಂ ಎಂ ತಿಳಿಸಿದ್ದಾರೆ. ಅದೇ ವೇಳೆ, ಆರ್‌ಎಂಎಂ ನೇತೃತ್ವದಲ್ಲೇ ಚುನಾವಣೆ ಎದುರಿಸುವುದಾಗಿ ರತ್ನಾಕರ್‌ ಕೂಡಾ ಘೋಷಿಸಿದ್ದಾರೆ.

ಚುನಾವಣೆ ನಿರ್ವಹಣೆ, ತಂತ್ರಗಾರಿಕೆ, ಪ್ರಚಾರ ಎಲ್ಲವೂ ಆರ್‌ಎಂಎಂ ನೇತೃತ್ವದಲ್ಲೇ ನಡೆಯಲಿದೆ ಎಂದು ಕಿಮ್ಮನೆ ರತ್ನಾಕರ್‌ ಹೇಳಿದ್ದಾರೆ.

ಟಿಕೆಟ್‌ಗೆ ಆಕಾಂಕ್ಷಿಯಾಗಿದ್ದೆ ನಿಜ, ಆದರೆ, ಕಿಮ್ಮನೆ ರತ್ನಾಕರ್‌ ಗೆ ಟಿಕೆಟ್‌ ಘೋಷಣೆ ಆದ ಮೇಲೆ ಯಾವುದೂ ಮನಸಿನಲ್ಲಿ ಇಟ್ಟಿಲ್ಲ. ಜನರಿಗಾಗಿ ಕಿಮ್ಮನೆ ರತ್ನಾಕರ್‌ ಗೆ ಬೆಂಬಲ ನೀಡಲು ನನ್ನ ಬೆಂಬಲಿಗರಿಗೂ ತಿಳಿಸಿದ್ದೇನೆ ಎಂದು ಆರ್‌ಎಂಎಂ ಹೇಳಿದ್ರು.

ಹೆಚ್ಚಿನ ಸುದ್ದಿ