Saturday, June 6, 2026
Homeಟಾಪ್ ನ್ಯೂಸ್ವಿಹೆಚ್‌ಪಿ ಮುಖಂಡನ ಕಾರಿನ ಮೇಲೆ ಫೈರಿಂಗ್:‌ ದೂರು ದಾಖಲು

ವಿಹೆಚ್‌ಪಿ ಮುಖಂಡನ ಕಾರಿನ ಮೇಲೆ ಫೈರಿಂಗ್:‌ ದೂರು ದಾಖಲು

ಚುನಾವಣೆ ಸಮೀಪಸುತ್ತಿದ್ದಂತೆ ಕೊಡಗಿನ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಹಾಗೂ ವಕೀಲ ಪಿ. ಕೃಷ್ಣಮೂರ್ತಿಯವರ ಕಾರಿನ ಮೇಲೆ ಫೈರಿಂಗ್‌ ನಡೆದಿದೆ. ಕೃಷ್ಣಮೂರ್ತಿ ಸಂಚರಿಸುತ್ತಿದ್ದ ಕಾರಿನ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಲು ಯತ್ನಿಸಿದ್ದಾರೆ ಎಂದು ದೂರು ನೀಡಿದ್ದಾರೆ.

ಬುಧವಾರ ತಡರಾತ್ರಿ ಮಡಿಕೇರಿ- ಚೆಟ್ಟಳ್ಳಿ ಮಾರ್ಗಮಧ್ಯದಲ್ಲಿ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದು, ಸ್ವಲ್ಪದರಲ್ಲೇ ಪಾರಾಗಿರುವುದಾಗಿ ಅವರು ಮಡಿಕೇರಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ .

ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ‌. ಈ ಸಂದರ್ಭದಲ್ಲಿ ಹೆಚ್ಚೇನೂ ಹೇಳಲು ಸಾಧ್ಯವಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ.

 ಚುನಾವಣೆ ಸಮಯದಲ್ಲಿ ಸಮಾಜದ ಶಾಂತಿ ಕದಡಲು ಕುತಂತ್ರ ನಡೆದಿದೆ ಎಂದು ಶಾಸಕ ಕೆ.ಜಿ ಬೋಪಯ್ಯ   ಕಿಡಿಕಾರಿದ್ದು, ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. 

ಹೆಚ್ಚಿನ ಸುದ್ದಿ