ಬೆಂಗಳೂರು: ಇಂದು ಸಂಜೆ (ಏಪ್ರಿಲ್ 14) ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ರು. 4 ಗಂಟೆಗೆ ಬಿಜೆಪಿಗೆ ರಾಜಿನಾಮೆ ನೀಡಲಿರುವ ಸವದಿ ಕಾಂಗ್ರೆಸ್ ಸೇರುತ್ತಿದ್ದಾರೆ. ಈಗಾಗಲೇ ಈ ಕುರಿತು ನಮ್ಮ ನಾಯಕರುಗಳಾದ ಸಿದ್ದರಾಮಯ್ಯ ಹಾಗೂ ಸುರ್ಜೆವಾಲಾ ಜೊತೆ ಸುದೀರ್ಘ ಚರ್ಚೆ ಮಾಡಿದ್ದೇವೆ. ಸವದಿಯವರು ನಮ್ಮ ಪಕ್ಷದ ಸಿದ್ದಾಂತ ಒಪ್ಪಿ ಕಾಂಗ್ರೆಸ್ ಸೇರುತ್ತಿದ್ದಾರೆ ಎಂದ್ರು
ಇದಕ್ಶುಕೂ ಮುನ್ಕ್ರನ ಬೆಳಿಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆಯಲ್ಲೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸಕ್ಕೆ ತೆರಳಿದ ಲಕ್ಷ್ಮಣ್ ಸವದಿ, ರಾಜ್ಯ ಉಸ್ತುವಾರಿ ರಣ್ ದೀಪ್ ಸುರ್ಜೇವಾಲಾ ಅವರೊಡನೆ ಚರ್ಚೆ ನಡೆಸಿದರು.
ಇನ್ನೊಂದೆಡೆ ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಪಕ್ಷಕ್ಕೆ 58 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳೇ ಇಲ್ಲ. ಹೀಗಾಗಿ ಯಾರೇ ಬಂದರೂ ಸೇರಿಸಿಕೊಳ್ಳುವುದು ಸಹಜ. ನಮ್ಮದು ಆಡಳಿತಾರೂಢ ಮತ್ತು ಗೆಲ್ಲುವ ಪಕ್ಷವಾಗಿರುವುದರಿಂದ ಟಿಕೆಟ್ ಗಾಗಿ ಸ್ಪರ್ಧೆ ಸಾಮಾನ್ಯ. ಯಾವುದೇ ನಾಯಕರು ಪಕ್ಷ ತೊರೆದರೂ ಕಾರ್ಯಕರ್ತರು ನಮ್ಮೊಡನೆಯೇ ಉಳಿಯಲಿದ್ದಾರೆ. ಲಕ್ಷ್ಮಣ ಸವದಿ ಪಕ್ಷ ಬಿಡುವುದರಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದ್ದಾರೆ.
