Monday, March 2, 2026
Homeಚುನಾವಣೆ 2023ಇಟ್ಟ ಹೆಜ್ಜೆ ಹಿಂತೆಗೆಯಲ್ಲ: ಮಾಜಿ ಸಿಎಂ ಜಗದೀಶ್ ಶೆಟ್ಟರ್

ಇಟ್ಟ ಹೆಜ್ಜೆ ಹಿಂತೆಗೆಯಲ್ಲ: ಮಾಜಿ ಸಿಎಂ ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ಬಿಜೆಪಿ ಟಿಕೆಟ್‌ ಕೈತಪ್ಪಿದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುವ ನಿರ್ಧಾರ ಮಾಡಿರುವ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್ ಇಂದು ಶಿರಸಿಗೆ ತೆರಳಿ ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿಯವರಿಗೆ ರಾಜಿನಾಮೆ ಸಲ್ಲಿಸಲಿದ್ದಾರೆ.

ಇಂದು ರಾಜಿನಾಮೆ ಸಲ್ಲಿಸಿದ ಬಳಿಕ ಹಿತೈಷಿಗಳು ಹಾಗೂ ಸ್ಥಳೀಯ ಕಾರ್ಯಕರ್ತರೊಂದಿಗೆ ಚರ್ಚಿಸಿ, ಮುಂದಿನ ನಡೆಯ ಬಗ್ಗೆ ತೀರ್ಮಾನಿಸುತ್ತೇನೆ ಎಂದಿರುವ ಶೆಟ್ಟರ್, ನಾನು ರಾಜೀನಾಮೆ ನೀಡುವ ನಿರ್ಧಾರ ಮಾಡಿದ್ದೇನೆ. ಯಾವುದೇ ಕಾರಣಕ್ಕೂ ಇಟ್ಟ ಹೆಜ್ಜೆ ಹಿಂತೆಗೆಯಲ್ಲ ಎಂದು ಹೇಳಿದ್ದಾರೆ.

ಹುಬ್ಬಳ್ಳಿಯ ತಮ್ಮ ನಿವಾಸದಲ್ಲಿ ಮಾತನಾಡಿದ ಶೆಟ್ಟರ್, ಕೇಂದ್ರ ನಾಯಕರ ನಡೆ ಬೇಸರ ತಂದಿದೆ. ನನ್ನ ಮನವೊಲಿಸಲು ಬಂದ ರಾಜ್ಯ ಚುನಾಚಣೆ ಉಸ್ತುವಾರಿ ಧರ್ಮೇಂದ್ರ ಪ್ರದಾನ್, ಪ್ರಹ್ಲಾದ್ ಜೋಷಿ ನನ್ನ ಭೇಟಿಗೂ ಮುನ್ನವೇ ಎಲ್ಲಾ ತೀರ್ಮಾನಿಸಿಯೇ ಬಂದಿದ್ದರು. ನನಗೆ ಟಿಕೆಟ್‌ ನೀಡಬಾರು ಎಂಬ ತೀರ್ಮಾನ ಮಾಡಿಯೇ ಬಂದಿದ್ದರು. ಇನ್ನು ಏನಾದರೂ ಬದಲಾವಣೆಯಾಗಬಹುದೆಂದು ಎನಿಸುವುದಿಲ್ಲ. ನಾನು ನನ್ನ ಮುಂದಿನ ತೀರ್ಮಾನ ಶೀಘ್ರವೇ ತಿಳಿಸುತ್ತೇನೆ ಎಂದು ಹೇಳಿದ್ದಾರೆ.

ಹೆಚ್ಚಿನ ಸುದ್ದಿ