Wednesday, August 5, 2026
Homeಚುನಾವಣೆ 2023ನಾಮಿನೇಷನ್‌ಗೂ ಮುನ್ನ ಸಚಿವ ಸುಧಾಕರ್ ಟೆಂಪಲ್ ರನ್

ನಾಮಿನೇಷನ್‌ಗೂ ಮುನ್ನ ಸಚಿವ ಸುಧಾಕರ್ ಟೆಂಪಲ್ ರನ್

ಚಿಕ್ಕಬಳ್ಳಾಪುರ: ಕಳೆದ ಗುರುವಾರ ಕುಟುಂಬ ಸಮೇತ ಸರಳವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದ ಸಚಿವ ಸುಧಾಕರ್ ನಗರದಲ್ಲಿ ಸಹಸ್ರಾರು ಮಂದಿ ಬೆಂಬಲಿಗರೊಂದಿಗೆ ಬೃಹತ್ ರೋಡ್ ಶೋ ನಡೆಸುವ ಮೂಲಕ ಅಧಿಕೃತವಾಗಿ ಬಿ ಫಾರಂ ಸಮೇತ ಇಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.

ನಾಮಿನೇಷನ್‌ ಹಿನ್ನೆಲೆ, ಡಾ.ಕೆ.ಸುಧಾಕರ್ ಇಂದು ಮೊದಲು ಮನೆಯಲ್ಲೇ ದೇವರ ಪೂಜೆ ಮಾಡಿ ನಂತರ ತಾಯಿ ಪೋಟೋಗೆ ನಮನ ಸಲ್ಲಿಸಿದರು. ಇದಾದ ನಂತರ ಚಿಕ್ಕಪ್ಯಾಯಲಗುರ್ಕಿಯ ತಮ್ಮ ಮನೆ ದೇವ್ರು ಚನ್ನಕೇಶವಸ್ವಾಮಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಬಳಿಕ ಶ್ರೀ ಭೋಗನಂದೀಶ್ವರ ಸ್ವಾಮಿ ದೇವರಿಗೆ ಪೂಜೆ ಪುನಸ್ಕಾರ ಮಾಡಿದರು.

ಇದಾದ ನಂತರ ಸೂಲಾಲಪ್ಪನದಿನ್ನೆ ಬಳಿಯ ಬಿಜಿಎಸ್ ಆಂಜನೇಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದ ನಂತರ ಶ್ರೀ ಮಂಗಳಾನಂದನಾಥ ಸ್ವಾಮಿಗಳ ಆಶೀರ್ವಾದ ಪಡೆಯಲಿದ್ದಾರೆ. ಇನ್ನೂ ಜಾಲಾರಿ ಲಕ್ಷ್ಮಿ ನರಸಿಂಹಸ್ವಾಮಿ, ರಂಗಸ್ಥಳ ರಂಗನಾಥ ಸ್ವಾಮಿ, ಕಾಡದಿಬ್ಬೂರು ನರಸಿಂಹಸ್ವಾಮಿ, ಚಿಕ್ಕಬಳ್ಳಾಪುರ ನಗರದ ಕೈವಾರ ತಾತಯ್ಯನ ದೇವಾಲಯ, ಅಂಬೇಡ್ಕರ್ ಹಾಗೂ ಕೆಂಪೇಗೌಡರ ಪ್ರತಿಮೆಗಳಿಗೆ ಮಾಲಾರ್ಪಣೆ. ನಂತರ ವಾಪಸಂದ್ರ ರಂಗನಾಥ ಸ್ವಾಮಿ ದೇವಾಲಯಕ್ಕೆ ಭೇಟಿ ಪೂಜೆ ಸಲ್ಲಸಲಿದ್ದಾರೆ. ಇದಾದ‌ ನಂತರ ಚಿಕ್ಕಬಳ್ಳಾಪುರ ನಗರದಲ್ಲಿ ಬೃಹತ್ ರೋಡ್ ಶೋ ನಡೆಸಿ ತಮ್ಮ ಬೆಂಬಲಿಗರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ.

ಹೆಚ್ಚಿನ ಸುದ್ದಿ