ವಿಜಯಪುರ: ಜೀವನದಲ್ಲಿ ಸಾರ್ಥಕವಾಗುವ ಘಟನೆ ಬರುವುದು ಬಹಳ ಕಡಿಮೆ. ಅಂತಹ ಕ್ಷಣ ಇಂದು ನಮಗೆ ಅನುಭವಿಸುವಂತೆ ಮಾಡಿದ್ದೀರಿ ಎಂದು ವಿಶ್ರಾಂತ ಪ್ರಾಚಾರ್ಯರಾದ ವಿ ಎಂ ಸುರಪುರ ಹೇಳಿದರು.
ಮೇ 24ರಂದು ಸ್ಥಳೀಯ ಚಿಂಚಲಿ ರೆಸಾರ್ಟ್ ನಲ್ಲಿ ಎಸ್ ಬಿ ಕಲಾ ಮತ್ತು ಕೆ ಸಿ ಪಿ ವಿಜ್ಞಾನ ಮಹಾವಿದ್ಯಾಲಯದ 2003- 04 ನೇ ಸಾಲಿನ ಬಿ ಎ ಅಂತಿಮ ವರ್ಷದ ವಿದ್ಯಾರ್ಥಿಗಳಿಂದ 21 ವರ್ಷಗಳ ನಂತರ ನಡೆದ ಗುರುವಂದನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸ್ತಾವಿಕವಾಗಿ ರವಿ ಖಾನಾಪುರ ಮಾತನಾಡಿ ಗುರುಗಳ ಕೊಡುಗೆ ಅಪಾರವಾಗಿದೆ ಅವರ ಜ್ಞಾನ ನಮಗೆ ಧಾರೆ ಎರೆದಿದ್ದರಿಂದ ನಾವು ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗಿ ರೂಪಗೊಂಡಿದ್ದೇವೆ. ಇಲ್ಲಿ ಸೇರಿದ 65ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ, ಪೊಲೀಸ್, ನ್ಯಾಯಾಂಗ, ಬ್ಯಾಂಕಿಂಗ್, ಕೆಎಸ್ಆರ್ಟಿಸಿ ಹಾಗೂ ಕೃಷಿ ಸೇರಿದಂತೆ 20 ಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ರಾಜ್ಯಾದ್ಯಂತ ಸೇವೆ ಸಲ್ಲಿಸುತ್ತಿದ್ದಾರೆ.




ಇದಕ್ಕೆಲ್ಲ ಕಾರಣ ಈ ಗುರುಗಳ ಪಾಠ ಪ್ರವಚನ ಅಷ್ಟೇ ಅಲ್ಲದೆ ಅವರ ಆಶೀರ್ವಾದ ನಮ್ಮ ಮೇಲಿದೆ ಎಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉಪನ್ಯಾಸಕ ಆರ್ ಎನ್ ದಿಂಡೂರ ಮಾತನಾಡಿ ಇಂದಿನ ಸಮಾಜದ ಸದ್ಯದ ಪರಿಸ್ಥಿತಿಯಲ್ಲಿ ಅಪ್ಪ ಅಮ್ಮ ಅತ್ತೆ ಮಾವರನ್ನು ನೋಡಿಕೊಳ್ಳುವರು ಬಹಳ ವಿರಳವಾಗಿದ್ದಾರೆ. ನನ್ನ ಮಕ್ಕಳು ಸೊಸೆಯಂದಿರನ್ನು ನೀವು ಇಂದು ಮರೆಸಿದಿರಿ, ನಿಮ್ಮ ಸೇವೆ ಅನನ್ಯವಾದದ್ದು ಎಂದರು. ಇನ್ನೋರ್ವ ಅತಿಥಿಯಾಗಿ ಭಾಗವಹಿಸಿದ ಉಪನ್ಯಾಸಕ ಎಸ್ ಬಿ ಬಿರಾದಾರ ಮಾತನಾಡಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಕರಿಗೆ ಗುರುವಂದನೆ ಮಾಡುವುದನ್ನು ಕೇಳಿದ್ದೇವೆ ಮತ್ತು ನೋಡಿದ್ದೇವೆ ಆದರೆ ಪದವಿ ಉಪನ್ಯಾಸಕರಿಗೆ ಗುರುವಂದನೆ ಮಾಡಿದ್ದು ಈ ಎಸ್ ಬಿ ಕಲಾ ಹಾಗೂ ಕೆ ಸಿ ಪಿ ವಿಜ್ಞಾನ ಮಹಾವಿದ್ಯಾಲಯದ ಇತಿಹಾಸದಲ್ಲಿಯೇ ಇದೇ ಮೊದಲು ಎಂದು ಹೇಳಿದರು. ರಾಜ್ಯದ ವಿವಿಧಡೆ ವಿವಿಧ ಇಲಾಖೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನೀವು ಬಿಡುವು ಮಾಡಿಕೊಂಡು ಎಲ್ಲರೂ ಸೇರಿ ಮಾಡಿದ ಇಂತಹ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು. ಅನಿಸಿಕೆ ಹೇಳಿದ ವಿದ್ಯಾರ್ಥಿ ಮಹಾಂತೇಶ ನರಸನಗೌಡರ ಎಲ್ಲ ಗುರುಗಳ ಪಾಠ ಪ್ರವಚನವನ್ನು ಮೆಲಕು ಹಾಕಿದರು. ಸಾನಿಧ್ಯ ವಹಿಸಿದ ಅದೇ ಬ್ಯಾಚಿನ ವಿದ್ಯಾರ್ಥಿಯಾಗಿದ್ದ ಹುಬ್ಬಳ್ಳಿ ನೀಲಕಂಠ ಮಠದ ಪೂಜ್ಯ ಶ್ರೀ ಶಿವಶಂಕರ ಶಿವಾಚಾರ್ಯರು ಮಾತನಾಡಿ ಗುರುವಿನ ಮಹತ್ವ ತಿಳಿಸಿದರು. ತಾಯಿ ಜನ್ಮ ನೀಡಿದರೆ ಗುರು ಸನ್ಮಾರ್ಗದ ಮೋಕ್ಷ ನೀಡುವವನು. ಜಗತ್ತನ್ನೇ ಗೆದ್ದ ಅಲೆಕ್ಸಾಂಡರ್ ಕೂಡ ಗುರುವಿಗೆ ತಲೆಬಾಗಿದ ಪ್ರಸಂಗವನ್ನು ತಿಳಿಸಿದರು.
ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಉಪನ್ಯಾಸಕರುಗಳಾದ ಕಪಾಲಿ, ಪಾಟೀಲ ರುದ್ರಾಕ್ಷಿ, ಸಂಕನ್ನವರ, ಪವಾರ, ಹುರುಳಿ, ಮೇಹರವಾಡಿ ಅಲ್ಲದೆ ಇನ್ನೂ ಅನೇಕರು ಪಾಲ್ಗೊಂಡಿದ್ದರು. ಕಾರ್ಯಕ್ರಮದುದ್ದಕ್ಕೂ ಗುರುವಿನ ಗುಣಗಾನ ಮಾಡುತ್ತಾ ಪ್ರಕಾಶ ಯರಗಟ್ಟಿ ನಿರೂಪಣೆ ಮಾಡಿದರೆ, ಮಹಾಂತೇಶ ಪಾಟೀಲ ಸ್ವಾಗತಿಸಿದರು, ಸೋಮಶೇಖರ ತಳೇವಾಡ ವಂದಿಸಿದರು.
ವಿಶಿಷ್ಟಪೂರ್ಣವಾಗಿ ನಡೆದ ಈ ಕಾರ್ಯಕ್ರಮದಲ್ಲಿ ರವಿ ಆಹೇರಿ ಪಿಪಿಟಿ ನಡೆಸಿಕೊಟ್ಟರು. ಮಹೇಂದ್ರ ಕುಮಾರ ನಾಯಕ, ಶ್ರೀಪಾದ್ ಜೋಶಿ, ಬಸವರಾಜ ಹಿರೇಮಠ, ಶಶಿಕಾಂತ ಲಿಂಗದಳ್ಳಿ, ವೀರಭದ್ರ, ಲಕ್ಷ್ಮೀಶ ಜಾಲವಾದಿ, ಸುರೇಶ ಜೀರಗಾಳ, ರಮೇಶ ಪಚ್ಚನ್ನವರ, ಶ್ರೀಶೈಲ ರಾಥೋಡ, ವಿನಾಯಕ ಜೋಶಿ, ಲಕ್ಷ್ಮಿಕಾಂತ ಬಾನಿಕೋಲ್, ಪುಷ್ಪಾ ಹುಣಶ್ಯಾಳ, ಜಯಶ್ರೀ ಬಿರಾದಾರ, ಪದ್ಮಾವತಿ ಸಿಂಗಾರಿ, ಮಂಜುಳಾ ಮುಗಳಿ, ಶೋಭಾ ತುಳಜನ್ನವರ, ಆಶಾ ಬೈರೊಡಗಿ, ಶಾರದಾ ಪಾಟೀಲ, ರೂಪಾ ಕಡಪಟ್ಟಿ ಅನುಪಮಾ ಕುಂಬಾರ, ಪರಸು ರಾಂಪುರ, ಜಿಯಾ ಆಲಮೀಲ್, ಅನಿಲ್ ಬಿರಾದಾರ, ಸಂಗನಬಸು ಪಾಟೀಲ್, ಸುನೀಲ್ ಕಾಪಸೇ, ಜೋಗಳೇಕರ, ಸವಿತಾ ಜಾಧವ, ಬಿ ಎಂ ಸಾಗರ್, ಬಸು ಕಲಾಲ್, ಕಡಕಭಾವಿ, ಬಸವರಾಜ್ ಸಾಗಾಯಿ, ಗುರು ಪಾಟೀಲ್, ಶಿವಕಾಂತ್ ನಾದ, ಶ್ರೀಶೈಲ್ ಭಗವತಿ, ಅಲ್ಲದೆ 65 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.
