Saturday, June 6, 2026
Homeರಾಜ್ಯಅಪ್ಪಟ್ಟ ರಂಗಭೂಮಿ ಕಲಾವಿದ ರಾಜು ತಾಳಿಕೋಟೆ!

ಅಪ್ಪಟ್ಟ ರಂಗಭೂಮಿ ಕಲಾವಿದ ರಾಜು ತಾಳಿಕೋಟೆ!

ಮುದ್ದೇಬಿಹಾಳ:

ಉತ್ತರ ಕರ್ನಾಟಕದ ವಿಶಿಷ್ಟ ಸೊಗಡಿನ ಭಾಷೆಯ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದ ಈ ಮಹಾನ್ ಕಲಾವಿದನ ಹಠಾತ್ ನಿಧನ ಎಲ್ಲರಿಗೂ ಆಘಾತ ತಂದಿದೆ.

ಹಲವು ದಶಕಗಳಿಂದ ನಾಟಕ ಮತ್ತು ಸಿನಿಮಾಗಳಲ್ಲಿ ಸಕ್ರಿಯರಾಗಿದ್ದ ರಾಜು ತಾಳಿಕೋಟಿ ಅವರು, ತಮ್ಮ ನಟನೆಯಿಂದ ಅಸಂಖ್ಯಾತ ಅಭಿಮಾನಿಗಳನ್ನು ಸಂಪಾದಿಸಿದ್ದರು. ಅವರ ಹಾಸ್ಯದ ಟೈಮಿಂಗ್ ಮತ್ತು ಸಂಭಾಷಣೆ ಹೇಳುವ ಶೈಲಿಗೆ ಮನಸೋಲದವರೇ ಇರಲಿಲ್ಲ. ಇತ್ತೀಚೆಗಷ್ಟೇ ಧಾರವಾಡ ರಂಗಾಯಣದ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡು, ರಂಗಭೂಮಿಗೆ ಹೊಸ ಚೈತನ್ಯ ತುಂಬುವ ಉತ್ಸಾಹದಲ್ಲಿದ್ದರು.

ಸಿಂದಗಿ, ತಾಳಿಕೋಟಿ ಹಾಗೂ ಬೆಂಗಳೂರಿನಲ್ಲಿ ನಿವಾಸ ಹೊಂದಿದ್ದ ರಾಜು ತಾಳಿಕೋಟಿ ಅವರಿಗೆ ಅಪಾರವಾದ ಬಳಗವಿತ್ತು. ಅವರ ಅಂತ್ಯಸಂಸ್ಕಾರವನ್ನು ಎಲ್ಲಿ ನಡೆಸಬೇಕು ಎಂಬ ಬಗ್ಗೆ ಅವರ ಕುಟುಂಬಸ್ಥರು ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ.ತಮ್ಮ ನಟನೆಯಿಂದ ಕನ್ನಡಿಗರ ಮುಖದಲ್ಲಿ ನಗು ಮೂಡಿಸುತ್ತಿದ್ದ ‘ನಗೆಯ ದೊರೆ’ ಇಂದು ನಮ್ಮೊಟ್ಟಿಗೆ ಇಲ್ಲ ಎಂಬುದು ಅತ್ಯಂತ ದುಃಖದ ಸಂಗತಿ. ರಾಜು ತಾಳಿಕೋಟಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ.ಉತ್ತರ ಕರ್ನಾಟಕದ ಕಂಪು, ಹಾಸ್ಯದ ಹುಟ್ಟುರಾಜು ತಾಳಿಕೋಟಿ ಅವರು ಮೂಲತಃ ಉತ್ತರ ಕರ್ನಾಟಕದವರು. ಹಾಗಾಗಿಯೇ ಅವರ ಸಂಭಾಷಣೆಯಲ್ಲಿ ಉತ್ತರ ಕರ್ನಾಟಕದ ವಿಶಿಷ್ಟ ಸೊಗಡು, ಸಹಜತೆ ಮತ್ತು ನುಡಿಗಟ್ಟುಗಳ ಬಳಕೆ ಹೇರಳವಾಗಿರುತ್ತಿತ್ತು. ಆದ್ರೆ ಇದು ಅವರ ಹಾಸ್ಯ ಪಾತ್ರಗಳಿಗೆ ಒಂದು ವಿಶಿಷ್ಟ ಆಯಾಮವನ್ನು ನೀಡಿತ್ತು.

ಹೆಚ್ಚಿನ ಸುದ್ದಿ