ಮುದ್ದೇಬಿಹಾಳ:

ಸಾಮಾಜಿಕ ನ್ಯಾಯಕ್ಕಾಗಿ ಕೃತಿಗಳ ಮೂಲಕ ಹೋರಾಟ ಮಾಡುವಲ್ಲಿ ಕನಕದಾಸರು ಮುಂಚೂಣೆಯಲ್ಲಿರು ದಾಸರು ಎಂದು ಯುವ ಮುಖಂಡ ಶಿವು ಕನ್ನೊಳ್ಳಿ ಹೇಳಿದರು.
ಇತ್ತೀಚಿಗೆ ಮುದ್ದೇಬಿಹಾಳ ತಾಲೂಕಿನ ಮದರಿ ಗ್ರಾಮದಲ್ಲಿ ನಡೆದ ಕನಕದಾಸರ 538ನೇ ಜಯಂತ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 1500ನೇ ಇಸ್ವಿಯಲ್ಲಿ ಸಮಾಜಕ್ಕೆ ಸಮಾನ ಬದುಕಿನ ಕೊಡುಗೆ ನೀಡುವ ಹಿರಿಮೆ ಕನಕದಾಸರಿಗೆ ಸಲ್ಲುತ್ತದೆ ಎಂದು ಅವರು ಹೇಳಿದರು.

ಎಸ್.ಬಿ.ನಾಗರಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದರು. ಕನಕದಾಸರ ಕುರಿತು ಮಹಾಂತೇಶ ಉಗರಗೋಳ ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಗಣ್ಯರಾದ ಭೀಮಶೇಪ್ಪ ಮದರಿ, ಪ್ರದೀಪ ನಾಡಗೌಡ, ಶಿವಪ್ಪಗೌಡ ರೂಡಗಿ, ಮಹಾಂತೇಶ ತಿಗಳಿ, ಭಜಂತ್ರಿ ಸರ್, ಭೀರಪ್ಪ ಮೇಟಿ,ಚನ್ನಪ್ಪ ವಡ್ಡರ, ಮುತ್ತಣ್ಣ ಎಲಿಗಾರ, ಬಸಪ್ಪ ನಾಗೂರ, ಬಸಪ್ಪ ಹುಗ್ಗಿ, ಲಗಮಣ್ಣ ಮೇಟಿ ಇದ್ದರು.

ಇದೇ ವೇಳೆಯಲ್ಲಿ ಮಿಲಿಟರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಹಡಗಲಿ ಗ್ರಾಮದ ಗಂಗಾಧರ ವಗ್ಗರ ಅವರನ್ನು ಗ್ರಾಮದ ಎಲ್ಲಾ ಹಿರಿಯರು ಸನ್ಮಾನಿಸಿ ಗೌರವ ಸಲ್ಲಿಸಿದರು.ನಾಗಪ್ಪ ರೂಡಗಿ ನಿರೂಪಿಸಿದರು. ವೈ.ಬಿ.ಕರಿ ವಂದಿಸಿದರು.

