Monday, March 2, 2026
Homeರಾಜ್ಯಮಹಿಳೆಯರ ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಭಾಗ್ಯಶ್ರೀ...!!!

ಮಹಿಳೆಯರ ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಭಾಗ್ಯಶ್ರೀ…!!!

ಮುದ್ದೇಬಿಹಾಳ:

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ನೀಡುತ್ತಿರುವ ಆಡಳಿತವನ್ನು ಸಾಕಷ್ಟು ಸಂಘ ಸಂಸ್ಥೆಗಳು ಅಭಿನಂದಿಸಿ ವಿವಿಧ ಪ್ರಶಸ್ತಿಗಳನ್ನು ನೀಡಿವೆ. ನಿಜಕ್ಕೂ ಇದು ಜನಪರ ಅದರಲ್ಲೂ ಮಹಿಳೆಯರಿಗೆ ಸ್ಥಾನಮಾನ ನೀಡುವಲ್ಲಿ ಯಶಸ್ವಿಯಾಗಿದೆ ಎಂದು ಪಕ್ಷದ ರಾಜ್ಯ ಮಹಿಳಾ ಕಾರ್ಯದರ್ಶಿ ಭಾಗ್ಯಶ್ರೀ ಬಾಬಣ್ಣ ಹೇಳಿದರು.

ಮುದ್ದೇಬಿಹಾಳ ಪಟ್ಟಣಕ್ಕೆ ಆಗಮಿಸಿದ ಅವರು ಸ್ಥಳೀಯ ಪಕ್ಷದ ವಿವಿಧ ಕಾರ್ಯಕರ್ತರನ್ನು ಭೇಟಿ ಮಾಡಿ ಸ್ಥಳೀಯ ಪಕ್ಷ ಸಂಘಟನೆ ಬಗ್ಗೆ ವರದಿ ಪಡೆದುಕೊಂಡು ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದಿನ ಯಾವುದೇ ಸರಕಾರದ ಅವಧಿಯಲ್ಲಿ ದಾಖಲಾದ ಮಹಿಳಾ ದೌರ್ಜನ್ಯ ಪ್ರಕರಣಕ್ಕಿಂತ ಇಂದಿನ ಕಾಂಗ್ರೆಸ್ ಸರಕಾರದಲ್ಲಿ ಪ್ರಕರಣಗಳು ಇಳಿಕೆಯಾಗಿವೆ. ಇದರಿಂದಲೇ ಮಹಿಳೆಯರಿಗೆ ಹೆಚ್ಚಿನ ರಕ್ಷಣೆ ನೀಡಿದ ಕೀರ್ತಿ ಇಂದಿನ ಸರಕಾರಕ್ಕೆ ಸಲ್ಲುತ್ತದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ತಾಲೂಕಾ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಭಿಷೇಕ ಪ್ರಭುಕರ, ತಾಲೂಕಾ ಸ. ಸಂಯೋಜಕಿ ನಿರ್ಮಲಾ ರಾಯಗೊಂಡ, ಮೇಘನಾ ಮಡಿವಾಳರ, ಭಾಗ್ಯಶ್ರೀ ಪಾಟೀಲ, ರೇಣುಕಾ ಪ್ರಭುಕರ, ಮಾಬುಬಿ ಭಗವಾನ ಸೇರಿದಂತೆ ಇತರರಿದ್ದರು.

ಹೆಚ್ಚಿನ ಸುದ್ದಿ