ಕಲಬುರಗಿ: ಬಿಜೆಪಿ ಪಕ್ಷ ಶೆಟ್ಟರ್ ಹಾಗೂ ಸವದಿಗೆ ಎಲ್ಲಾ ರೀತಿಯ ಅವಕಾಶ ನೀಡಿತ್ತು.. ಆದರೂ ಅವರು ಬಿಜೆಪಿ ತೊರೆದಿದ್ದು ಸರಿಯಲ್ಲ. ಇದೆಲ್ಲದಕ್ಕೂ ಮುಂದೆ ಅವರು ಪಶ್ಚಾತ್ತಾಪ ಪಡ್ತಾರೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ
ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಕೆಲಸ ಮಾಡುವುದು ಗೌರವದ ವಿಚಾರ. ಆಂತಹ ಅವಕಾಶ ಇದ್ದರೂ ಅದರಿಂದ ದೂರ ಹೋದವರು ಭವಿಷ್ಯದಲ್ಲಿ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಬಿಜೆಪಿ ದೇಶದ ಅತಿ ದೊಡ್ಡ ಪಕ್ಷವಾಗಿದ್ದು, ಕಾಂಗ್ರೆಸ್ ಮುಳುಗುತ್ತಿರುವ ಪಕ್ಷವಾಗಿದೆ. ಇಂತಹ ಮುಳುಗುತ್ತಿರುವ ಪಕ್ಷಕ್ಕೆ ಕಾಲಿಟ್ಟು ಕಾಂಗ್ರೆಸ್‌ನೊಂದಿಗೆ ಅವರೂ ಮುಳುಗುತ್ತಾರೆ ಎಂದು ವ್ಯಂಗ್ಯ ಮಾಡಿದ್ದಾರೆ.
