Wednesday, April 29, 2026
HomeUncategorized40% ಕಮಿಷನ್ ಆರೋಪಕ್ಕೆ ಮತ್ತೊಂದು ಗರಿ!- ಕಮಿಷನ್ ವಿಡಿಯೋ ವೈರಲ್

40% ಕಮಿಷನ್ ಆರೋಪಕ್ಕೆ ಮತ್ತೊಂದು ಗರಿ!- ಕಮಿಷನ್ ವಿಡಿಯೋ ವೈರಲ್

ಬೆಳಗಾವಿ: ಕಾಗವಾಡ ಶಾಸಕ ಶ್ರೀಮಂತ ಪಾಟೀಲ್‍ರ ಆಪ್ತ ಎನ್ನಲಾದ ನಾನಾಸಾಹೇಬ ಅವತಾಡೆ ಎಂಬ ವ್ಯಕ್ತಿಯೊಬ್ಬ ಟೆಂಡರ್ ನೀಡಲು ಗುತ್ತಿಗೆದಾರರಿಂದ ಲಕ್ಷಲಕ್ಷ ರೂ. ಕಮಿಷನ್ ಸ್ವೀಕರಿಸುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಗುತ್ತಿಗೆದಾರರ ಸಂತೋಷ್ ಪಾಟೀಲ್ ಪ್ರಕರಣ ಮಾಸುವ ಮುನ್ನವೇ ಕಾಂಗ್ರೆಸ್ ಪಕ್ಷ ಮಾಡುತ್ತಿದ್ದ ಆರೋಪಕ್ಕೆ ಮತ್ತೊಂದು ಭರ್ಜರಿ ಆಧಾರ ಸಿಕ್ಕಿದೆ.
ಖಾಸಗಿ ಸ್ಥಳದಲ್ಲಿ ನಡೆದಿದೆ ಎನ್ನಲಾದ ಅವತಾಡೆ- ಗುತ್ತಿಗೆದಾರರ ನಡುವೆ ನಡೆದಿರುವ ಎರಡು ವಿಡಿಯೋ ತುಣುಕು ಎಲ್ಲೆಡೆ ಹರಿದಾಡಿದೆ. ಮೊದಲ ತುಣುಕಿನಲ್ಲಿ ನಾನಾಸಾಹೇಬ ಅವತಾಡೆ ತಮ್ಮ ಕ್ಷೇತ್ರದಲ್ಲಿನ ಅಭಿವೃದ್ಧಿ ಕಾಮಗಾರಿಗಳ ಟೆಂಡರ್ ನೀಡಲು ದರ ನಿಗದಿ ಮಾಡಿದ್ದು, ಕಡಿಮೆ ಕಮಿಷನ್ ನೀಡುವ ಗುತ್ತಿಗೆದಾರರಿಗೆ ಟೆಂಡರ್ ನೀಡಲು ಸಾಹೇಬರು (ಶಾಸಕರು) ಒಪ್ಪುವುದಿಲ್ಲ ಎಂದು ನುಡಿದಿರುವುದು ದಾಖಲಾಗಿದೆ.
ಎರಡನೇ ತುಣುಕಿನಲ್ಲಿ, ಇನ್ನೋವಾ ಕಾರಿನಲ್ಲಿ ಐವತ್ತು ಸಾವಿರ ರೂ.ಗಳ ಹಲವು ಕಂತೆಗಳನ್ನು ಗುತ್ತಿಗೆದಾರರಿಂದ ತೆಗೆದುಕೊಂಡು ಕಾರಿನೊಳಗೆ ಇಡುತ್ತಿರುವುದು ದಾಖಲಾಗಿದೆ. ಜೊತೆಗೆ ಇದು ಸಾಹೇಬರಿಗೆ ಆಯಿತು. ಮೇಲೆ ಒಂದು ಹತ್ತು ಸಾವಿರ ಕೊಡಿ ಎಂದು ಯಾಚಿಸಿರುವುದು ಸೆರೆಯಾಗಿದೆ.
ಈ ಕುರಿತು ಇದುವರೆಗೂ ಶಾಸಕರಾಗಲೀ, ಬಿಜೆಪಿ ನಾಯಕರಾಗಲೀ ಪ್ರತಿಕ್ರಿಯೆ ನೀಡಿಲ್ಲ.

ಹೆಚ್ಚಿನ ಸುದ್ದಿ