Friday, April 17, 2026
Homeಚುನಾವಣೆ 2023ನನ್ನ ತಂದೆ ಟಿಕೆಟ್‌ ಕೇಳಿಲ್ಲ, ಹೈಕಮಾಂಡ್‌ ಕೊಟ್ಟಿದೆ: ವಿಜಯೇಂದ್ರ

ನನ್ನ ತಂದೆ ಟಿಕೆಟ್‌ ಕೇಳಿಲ್ಲ, ಹೈಕಮಾಂಡ್‌ ಕೊಟ್ಟಿದೆ: ವಿಜಯೇಂದ್ರ

ರಾಘವೇಂದ್ರ ಅವರಿಗೆ ಟಿಕೆಟ್‌ ನೀಡಲು ಹೈಕಮಾಂಡ್‌ ಕಾರಣ, ವಿಜಯೇಂದ್ರಗೆ ಟಿಕೆಟ್‌ ನೀಡಲೂ ಹೈಕಮಾಂಡ್‌ ಕಾರಣ, ಯಡಿಯೂರಪ್ಪ ತಮ್ಮ ಪುತ್ರರಿಗೆ ಟಿಕೆಟ್‌ ಕೇಳಿಲ್ಲ ಎಂದು ವಿಜಯೇಂದ್ರ ಹೇಳಿದ್ದಾರೆ.

ಯಡಿಯೂರಪ್ಪ ಯಾವತ್ತೂ ತಮ್ಮ ಕುಟುಂಬಸ್ಥರ ಬಗ್ಗೆ ಚಿಂತೆ ಮಾಡಿಲ್ಲ, ಅವರೇ ಬೆಳೆಯಬೇಕು ಅನ್ನುವುದು ಅವರ ಆಸೆ, ನಾವು ನಮ್ಮ ಬಲದಲ್ಲಿ ಬೆಳೆಯಬೇಕು, ನಾವು ಹೋರಾಡಬೇಕು ಅನ್ನುವುದು ಅವರ ಬಯಕೆಯಾಗಿತ್ತು ಎಂದು ವಿಜಯೇಂದ್ರ ಹೇಳಿದ್ದಾರೆ.

ಟಿಕೆಟ್ ನೀಡುವುದು ಪಕ್ಷದ ಹೈಕಮಾಂಡ್ ನಿರ್ಧಾರ. ಕುಟುಂಬದ ಸದಸ್ಯರು ಸ್ವಂತವಾಗಿ ಬೆಳೆಯಬೇಕೆಂದು ಅವರು ಬಯಸುತ್ತಾರೆ. ಯಡಿಯೂರಪ್ಪರ ಮಗ ಎನ್ನುವ ಕಾರಣಕ್ಕೆ ನನಗೆ ವಿಶೇಷ ಸವಲತ್ತು ಇಲ್ಲ ಎಂದು ಅವರು ಹೇಳಿದ್ದಾರೆ.

ಇಡೀ ರಾಜ್ಯದಲ್ಲಿ ಯುವಜನತೆ ನನ್ನನ್ನು ಪ್ರೀತಿಸುತ್ತಾರೆ, ಬೆಂಬಲಿಸುತ್ತಾರೆ ಎಂದು ವಿಜಯೇಂದ್ರ ಹೇಳಿದ್ದಾರೆ.

ಹೆಚ್ಚಿನ ಸುದ್ದಿ