Friendship Day: ಸ್ನೇಹಿತರ ಕಾಲೆಳೆಯುತ್ತಲೇ ಪ್ರೀತಿ ಹಂಚಲು ‘ಸನ್‌ಫೀಸ್ಟ್ ಫೆಂಟಾಸ್ಟಿಕ್’ನಿಂದ ಹೊಸ ಕ್ಯಾಂಪೇನ್!
ಸ್ನೇಹಿತರ ಕಾಲೆಳೆಯುವುದು, ಕೋಳಿ ಜಗಳ ಹಾಗೂ ತಮಾಷೆಯ ಕಿಚಾಯಿಸುವಿಕೆಗಳೇ ಇಂದಿನ ಯುವಜನತೆಯ ಸ್ನೇಹದ ಸಂಕೇತಗಳಾಗಿವೆ. ಇದೇ ಟ್ರೆಂಡ್ ಅನ್ನು ಬಳಸಿಕೊಂಡು, ಈ ಬಾರಿಯ ಸ್ನೇಹಿತರ ದಿನಾಚರಣೆಯನ್ನು ಮತ್ತಷ್ಟು ಮೋಜು – ಮಸ್ತಿಯಿಂದ ಆಚರಿಸಲು ‘ಸನ್‌ಫೀಸ್ಟ್ ಫೆಂಟಾಸ್ಟಿಕ್’ ಹೊಸ ಮತ್ತು ವಿನೂತನ ಕ್ಯಾಂಪೇನ್ ಒಂದನ್ನು ಆರಂಭಿಸಿದೆ.
ʼಸ್ನೇಹದಲ್ಲಿ ಕಾಲೆಳೆಯುವುದರಲ್ಲೂ ಪ್ರೀತಿ ಅಡಗಿರುತ್ತದೆʼ ಎಂಬ ಪರಿಕಲ್ಪನೆ ಇಟ್ಟುಕೊಂಡು #RoastedWithLove (ಪ್ರೀತಿಯಿಂದ ಕಾಲೆಳೆಯುವುದು) ಎಂಬ ಅಭಿಯಾನವನ್ನು ಸನ್‌ಫೀಸ್ಟ್ ಪರಿಚಯಿಸಿದೆ.
ಇದರಲ್ಲಿ ಯುವಕರು ತಮ್ಮ ಸ್ನೇಹಿತರ ತಮಾಷೆಯ ಗುಣಗಳು, ವಿಚಿತ್ರ ಅಭ್ಯಾಸಗಳು ಹಾಗೂ ಗುಟ್ಟುಗಳನ್ನು ಬಳಸಿಕೊಂಡು, ಅವರಿಗೆ ಹೊಂದುವಂತಹ ‘ರೋಸ್ಟ್ ಸ್ಟಿಕ್ಕರ್’ಗಳನ್ನು ತಯಾರಿಸಿ ವಾಟ್ಸಾಪ್‌ನಲ್ಲಿ ಹಂಚಿಕೊಳ್ಳಬಹುದು.
ಎಐ ತಂತ್ರಜ್ಞಾನದ ಬಳಕೆ
ಈ ಕ್ಯಾಂಪೇನ್‌ನ ಪ್ರಮುಖ ಆಕರ್ಷಣೆ ಎಂದರೆ ಇದರಲ್ಲಿ ಬಳಸಲಾಗಿರುವ ಕೃತಕ ಬುದ್ಧಿಮತ್ತೆ (ಎಐ) ಚಾಟ್‌ಬಾಟ್. ನೀವು ನಿಮ್ಮ ಸ್ನೇಹಿತನ ಬಗ್ಗೆ ಅಥವಾ ಆತನ ತಮಾಷೆಯ ಗುಣಗಳ ಬಗ್ಗೆ ಈ ಚಾಟ್‌ಬಾಟ್‌ಗೆ ಹೇಳಿದರೆ ಸಾಕು, ಅದು ಆತನಿಗೆ ತಕ್ಕನಾದ ತಮಾಷೆಯ ಹಾಗೂ ಕಸ್ಟಮೈಸ್ಡ್ ಆದ ಸ್ಟಿಕ್ಕರ್‌ಗಳನ್ನು ಕ್ಷಣಾರ್ಧದಲ್ಲಿ ತಯಾರಿಸಿ ಕೊಡುತ್ತದೆ.
ಈ ಮೋಜಿನ ಆಟವನ್ನು ಕೇವಲ ಆನ್‌ಲೈನ್‌ಗೆ ಮಾತ್ರ ಸೀಮಿತಗೊಳಿಸದೆ, ಸನ್‌ಫೀಸ್ಟ್ ಸಂಸ್ಥೆಯು ಫ್ರೆಂಡ್‌ಶಿಪ್ ಡೇ ವೀಕೆಂಡ್‌ನಲ್ಲಿ ಕಾಲೇಜು ಕ್ಯಾಂಪಸ್‌ಗಳಿಗೂ ತೆಗೆದುಕೊಂಡು ಹೋಗಿತ್ತು. ಅಲ್ಲಿ ವಿದ್ಯಾರ್ಥಿಗಳು ತಮ್ಮ ಸ್ನೇಹಿತರಿಗಾಗಿ ಎಐ ಬಳಸಿ ತಕ್ಷಣವೇ ತಮಾಷೆಯ ಸ್ಟಿಕ್ಕರ್‌ಗಳನ್ನು ರಚಿಸಿ, ಪ್ರಿಂಟ್ ಮಾಡಿಕೊಂಡು, ಅವರಿಗೆ ಅಂಟಿಸಿ ಖುಷಿಪಟ್ಟಿದ್ದಾರೆ.
ಈ ಕ್ಯಾಂಪೇನ್ ಬಗ್ಗೆ ಮಾತನಾಡಿದ ಐಟಿಸಿ ಸಂಸ್ಥೆಯ ಚಾಕೊಲೇಟ್, ಕಾಫಿ ಮತ್ತು ಮಿಠಾಯಿ ವಿಭಾಗದ ಉಪಾಧ್ಯಕ್ಷರಾದ ಸುಭಾಷ್ ಬಲಾರ್, “ಇಂದಿನ ಯುವಜನತೆಗೆ ಕಾಲೆಳೆಯುವುದು ಪ್ರೀತಿ ತೋರುವ ಒಂದು ಭಾಷೆಯಾಗಿದೆ. ಸ್ನೇಹದಲ್ಲಿನ ಈ ತಮಾಷೆಯನ್ನು ಮತ್ತಷ್ಟು ಇಂಟರಾಕ್ಟಿವ್ ಆಗಿ ಆಚರಿಸಲು ನಾವು ಈ ಕ್ಯಾಂಪೇನ್ ತಂದಿದ್ದೇವೆ. ನಮ್ಮ ಬ್ರ್ಯಾಂಡ್‌ನ ‘ಮೇಕ್ ಎವರಿಡೇ ಫೆಂಟಾಸ್ಟಿಕ್!’ (ಪ್ರತಿದಿನವನ್ನೂ ಅದ್ಭುತವಾಗಿಸಿ) ಎಂಬ ಉದ್ದೇಶವನ್ನು ಇದು ಸಾಕಾರಗೊಳಿಸುತ್ತಿದೆ,” ಎಂದರು.
ನೀವು ಭಾಗವಹಿಸುವುದು ಹೇಗೆ?
ಆಗಸ್ಟ್ 1 ರಂದು ಶುರುವಾಗಿರುವ ಈ ಕ್ಯಾಂಪೇನ್ ಮುಂದಿನ ಕೆಲ ವಾರಗಳವರೆಗೆ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲೈವ್ ಇರಲಿದೆ. ನೀವು ಸಹ ಈ ಆಟದಲ್ಲಿ ಪಾಲ್ಗೊಳ್ಳಲು, ಸನ್‌ಫೀಸ್ಟ್ ಫೆಂಟಾಸ್ಟಿಕ್‌ನ ಅಧಿಕೃತ ವೆಬ್‌ಸೈಟ್ ಅಥವಾ ಅವರ ಇನ್‌ಸ್ಟಾಗ್ರಾಮ್ ಪೇಜ್‌ಗೆ ಭೇಟಿ ನೀಡಿ, ಅಲ್ಲಿರುವ ಎಐ ವಾಟ್ಸಾಪ್ ಬಾಟ್ ಲಿಂಕ್ ಕ್ಲಿಕ್ ಮಾಡಬಹುದು.
ಇನ್ನೇಕೆ ತಡ? ನೀವೂ ಕೂಡ ನಿಮ್ಮ ಬೆಸ್ಟ್ ಫ್ರೆಂಡ್‌ನನ್ನು ಡಿಜಿಟಲ್ ಆಗಿ ಕಾಲೆಳೆಯುವ ಮೂಲಕ ಈ ಬಾರಿಯ ಫ್ರೆಂಡ್‌ಶಿಪ್ ಡೇಯನ್ನು ಮಜವಾಗಿ ಆಚರಿಸಿ!
