Friday, April 17, 2026
HomeUncategorizedಇಸ್ರೋದ ಮತ್ತೊಂದು ಮೈಲಿಗಲ್ಲು, ಮರುಬಳಕೆ ವೆಹಿಕಲ್ ಪರೀಕ್ಷೆ ಯಶಸ್ವಿ

ಇಸ್ರೋದ ಮತ್ತೊಂದು ಮೈಲಿಗಲ್ಲು, ಮರುಬಳಕೆ ವೆಹಿಕಲ್ ಪರೀಕ್ಷೆ ಯಶಸ್ವಿ

ಚಿತ್ರದುರ್ಗ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮರುಬಳಕೆ ಮಾಡಬಹುದಾದ ಉಡಾವಣಾ ವಾಹನದ ಲ್ಯಾಂಡಿಂಗ್ ಪ್ರಯೋಗವನ್ನು ಯಶಸ್ವಿಯಾಗಿ ನಡೆಸುವ ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸಿದೆ.

ಚಿತ್ರದುರ್ಗದಲ್ಲಿರುವ ಏರೋನಾಟಿಕಲ್ ಟೆಸ್ಟ್ ರೇಂಜ್ (ATR)ನಲ್ಲಿ ಭಾನುವಾರ ಮರುಬಳಕೆ ಮಾಡಬಹುದಾದ ಲಾಂಚ್ ವೆಹಿಕಲ್ ಅಟಾನಮಸ್ ಲ್ಯಾಂಡಿಂಗ್ ಮಿಷನ್ (RLV LEX) ಪರೀಕ್ಷೆಯನ್ನು ಡಿಆರ್ ‌ಡಿಒ ಮತ್ತು ಭಾರತೀಯ ವಾಯುಪಡೆಯೊಂದಿಗೆ ಜಂಟಿಯಾಗಿ ನಡೆಸಿದ್ದು ಯಶಸ್ವಿಯಾಗಿದೆ ಎಂದು ಇಸ್ರೋ ಹೇಳಿದೆ.

ಏಪ್ರಿಲ್​​ 2ರ ಭಾನುವಾರ ಬೆಳಗ್ಗೆ 7:10ಕ್ಕೆ ಭಾರತ ವಾಯುಸೇನೆಗೆ ಸೇರಿದ ಚಿನೂಕ್​ ಹೆಲಿಕಾಪ್ಟರ್​​ ಮೂಲಕ ಲಾಂಚ್​ ವೆಹಿಕಲ್​​ (RLV) ಅನ್ನು 4.5 ಕಿಲೋ ಮೀಟರ್​ ಎತ್ತರಕ್ಕೆ ತೆಗೆದುಕಂಡು ಹೋಗಲಾಗಿತ್ತು. ಆ ಬಳಿಕ ಇಂಟಿಗ್ರೆಟೆಡ್​​ ನ್ಯಾವಿಗೇಷನ್, ಗೈಡನ್ಸ್​, ಕಂಟ್ರೋಲ್​​ ಸಿಸ್ಟಮ್​​ ಬಳಕೆ ಮಾಡಿಕೊಂಡು ರನ್​​ವೇನಲ್ಲಿ ಲ್ಯಾಂಡ್​​ ಆಗಿದೆ ಎಂದು ಇಸ್ರೋ ವಿವರಣೆ ನೀಡಿದೆ.

ಭಾರತೀಯ ವಾಯುಪಡೆ (IAF), ಮಿಲಿಟರಿ ಏರ್‌ವರ್ತಿನೆಸ್ ಅಂಡ್​ ಸರ್ಟಿಫಿಕೇಷನ್ (CEMILAC), ಏರೋನಾಟಿಕಲ್​ ಡೆವಲಪ್​​ಮೆಂಟ್​ ಎಸ್ಟಾಬ್ಲಿಷ್​ಮೆಂಟ್ (ADRDE) ಸಂಸ್ಥೆಗಳು ಪರೀಕ್ಷೆಗೆ ಸಹಕಾರ ನೀಡಿವೆ. ಪರೀಕ್ಷೆ ಯಶಸ್ವಿಯಾಗಿರುವ ವಿಡಿಯೋವನ್ನು ಇಸ್ರೋ ಟ್ವಿಟರ್​ನಲ್ಲಿ ಶೇರ್​ ಮಾಡಿದೆ.

ಹೆಚ್ಚಿನ ಸುದ್ದಿ