Sunday, April 26, 2026
Homeಚುನಾವಣೆ 2023ಏಪ್ರಿಲ್ 14ರಂದು ಲಕ್ಷ್ಮಣ ಸವದಿ ಬಿಜೆಪಿಗೆ ರಾಜಿನಾಮೆ

ಏಪ್ರಿಲ್ 14ರಂದು ಲಕ್ಷ್ಮಣ ಸವದಿ ಬಿಜೆಪಿಗೆ ರಾಜಿನಾಮೆ

ಬೆಳಗಾವಿ: ಅಥಣಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ತೀವ್ರವಾಗಿ ಅಸಮಾಧಾನಗೊಂಡಿರುವ ಲಕ್ಷ್ಮಣ ಸವದಿ ಬಿಜೆಪಿಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ.

ಇಂದು ಸಂಜೆ (ಏಪ್ರಿಲ್13) ಬೆಂಬಲಿಗರೊಂದಿಗೆ ಸಮಾಲೋಚನಾ ಸಭೆ ಕರೆದಿರುವ ಸವದಿ, ಬೆಂಬಲಿಗರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಅದಕ್ಕೂ ಮೊದಲೇ ರಾಜಿನಾಮೆ ನಿರ್ಧಾರ ಪ್ರಕಟಿಸಿರುವ ಲಕ್ಷ್ಮಣ ಸವದಿ, ಪರಿಷತ್‌ ಸದಸ್ಯತ್ವ ಸ್ಥಾನ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸೋದಾಗಿ ಹೇಳಿದ್ದಾರೆ

ಈಗಾಗಲೇ ಕಾಂಗ್ರೆಸ್ ಹಾಗೂ ಜೆಡಿಎಸ್‌ ಪಕ್ಷಗಳು ಸವದಿಯವರನ್ನು ಸಂಪರ್ಕಿಸಿದ್ದು, ಸವದಿ ಯಾವ ಕಡೆ ಹೆಜ್ಜೆ ಹಾಕ್ತಾರೆ ಅನ್ನೋ ಕೂತೂಹಲ ಮೂಡಿದೆ

ಹೆಚ್ಚಿನ ಸುದ್ದಿ