ಬೆಳಗಾವಿ: ಅಥಣಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಲಕ್ಷ್ಮಣ ಸವದಿಗೆ ಈ ಬಾರಿ ಟಿಕೆಟ್ ಸಿಗೋದು ಅನುಮಾನ ಎನ್ನಲಾಗಿದ್ದು, ಇದಕ್ಕೆ ಲಕ್ಷ್ಮಣ ಸವದಿ ಪ್ರತಿಕ್ರಿಯೆ ನೀಡಿದ್ದಾರೆ
ನನಗೆ ಟಿಕೆಟ್ ಸಿಗುವ ಭರವಸೆ ಇದೆ. ಹಾಗೊಮ್ಮೆ ಟಿಕೆಟ್ ಸಿಗದಿದ್ರೆ ನನ್ನ ಕ್ಷೇತ್ರದ ಜನ ಹೇಳಿದಂತೆ ಮಾಡುತ್ತೇನೆ. ಅವರು ಕಳೆದ 20 ವರ್ಷ ನಾನು ಹೇಳಿದಂತೆ ಕೇಳಿದ್ದಾರೆ. ಈಗ ಅವರು ಹೇಳಿದಂತೆ ಕೇಳುವ ಸಮಯ ಬಂದಿದೆ. ನ್ನ ಜನರು ಏನು ಹೇಳುತ್ತಾರೋ ಅದೇ ಅಂತಿಮ. ಅವರು ಮುಳುಗು ಅಂದ್ರೆ ಮುಳುಗುತ್ತೇನೆ, ಅವರು ಸ್ಪರ್ಧೆ ಮಾಡು ಅಂದ್ರೆ ಮಾಡುತ್ತೇನೆ ಎಂದು ಲಕ್ಷ್ಮಣ ಸವದಿ ಹೇಳಿದ್ದಾರೆ
