Thursday, April 23, 2026
Homeಚುನಾವಣೆ 2023ಎತ್ತಿನ ಗಾಡಿಯ ತೇರು, ಭಾಜಾ ಭಜಂತ್ರಿ - ಈ ಅಜ್ಜಿ ನಾಮಪತ್ರ ಸಲ್ಲಿಸಿದ ಸ್ಟೈಲ್ ನೋಡಿ!

ಎತ್ತಿನ ಗಾಡಿಯ ತೇರು, ಭಾಜಾ ಭಜಂತ್ರಿ – ಈ ಅಜ್ಜಿ ನಾಮಪತ್ರ ಸಲ್ಲಿಸಿದ ಸ್ಟೈಲ್ ನೋಡಿ!

ಕೋಲಾರ: ವಿಶಿಷ್ಟ ರೀತಿಯಲ್ಲಿ ನಾಮಪತ್ರ ಸಲ್ಲಿಸುವ ಮೂಲಕ ಮಾಲೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ನಾರಾಯಣಮ್ಮ ಎಲ್ಲರ ಗಮನ ಸೆಳೆದಿದ್ದಾರೆ. ಅರವತ್ತು ವರ್ಷ ಪ್ರಾಯದ ನಾರಾಯಣಮ್ಮ ಸಿಂಗರಿಸಿದ ಎತ್ತಿನಗಾಡಿಯಲ್ಲಿ, ತಮಟೆ ಡೋಲು ವಾದ್ಯಗಳ ಮೆರವಣಿಗೆಯೊಂದಿಗೆ ಬಂದು ಸೋಮವಾರ ನಾಮಪತ್ರ ಸಲ್ಲಿಸಿದರು.
ಯಾವುದೇ ಹಣಬಲವಿಲ್ಲದೇ, ಜನಬಲವಿಲ್ಲದೇ ನಾನು ಚುನಾವಣೆ ಎದುರಿಸುತ್ತಿದ್ದೇನೆ ಎಂದು ನಾರಾಯಣಮ್ಮ ಹೇಳಿದ್ದಾರೆ. ನಾರಾಯಣಮ್ಮ ಅವರ ಪುತ್ರಿ ನ್ಯಾಯಾಧೀಶೆಯಾಗಿ ಸೇವೆ ಸಲ್ಲಿಸುತ್ತಿದ್ದು, ನನ್ನ ರಾಜಕಾರಣಕ್ಕೂ ಮಗಳ ವೃತ್ತಿಗೂ ಸಂಬಂಧವಿಲ್ಲ ಎಂದು ನಾರಾಯಣಮ್ಮ ನುಡಿದಿದ್ದಾರೆ.

ಹೆಚ್ಚಿನ ಸುದ್ದಿ