ಬಿಜೆಪಿಯಲ್ಲಿ ಬಂಡಾಯ ಪರ್ವ ಶುರುವಾಗಿದೆ. ಘಟಾನುಘಟಿ ನಾಯಕರೇ ಬಂಡಾಯವೆದ್ದಿದ್ದಾರೆ. ಬಿಜೆಪಿ ಪ್ರಭಾವಿ ನಾಯಕ ರಾಮದಾಸ್ ಕೂಡಾ ಅಸಮಾಧಾನ ಹೊರಹಾಕಿದ್ದು, “ಮಂತ್ರಿ ಸ್ಥಾನವನ್ನು ರಾತ್ರೋರಾತ್ರಿ ನನಗೆ ತಪ್ಪಿಸಲಾಯಿತು. ಎರಡು ಮೂರು ಬಾರಿ ನನಗೆ ಸಚಿವ ಸ್ಥಾನ ತಪ್ಪಿತು” ಎಂದಿದ್ದಾರೆ.
“ನನಗೆ ಕಾರ್ಯಕರ್ತರೆ ನಿರ್ಧಾರವೇ ಅಂತಿಮ. ಇದು ನನ್ನ ಕೊನೆಯ ಚುನಾವಣೆ. ಇದೊಂದು ಬಾರಿ ಚುನಾವಣೆ ಮುಗಿಸಿ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಇರೋ ಕನಸು ಈಡೇರಿಸಿ ಕೊಳ್ತಿನಿ” ಎಂದು ರಾಮದಾಸ್ ಹೇಳಿದ್ದಾರೆ.
ಗದ್ಗತರಾಗಿ ಮಾತಾಡಿದ ರಾಮದಾಸ್, ಇನ್ನೂ ಸಮಯವಿದೆ ತಾಳ್ಮೆಯಿಂದ ಇರಿ ಎಂದು ಬೆಂಬಲಿಗರಿಗೆ ಕರೆ ನೀಡಿದ್ದಾರೆ.
ಕೇಂದ್ರ ಸಚಿವರ ಮುಂದೆ ನನ್ನ ಮನವಿ ಇಟ್ಟು ಬಂದಿದ್ದೇನೆ. ವ್ಯಕ್ತಿಗಿಂತಾ ಪಕ್ಷ ಮುಖ್ಯ. ಪಕ್ಷಕ್ಕಿಂತಾ ಕಾರ್ಯಕರ್ತ ಮುಖ್ಯ.ಈ ಬೆಳವಣಿಗೆ ಬಗ್ಗೆ ನೋವಿದೆ. ಬೇರೆ ಪಕ್ಷದ ದೊಡ್ಡ ನಾಯಕರು ನನ್ನನ್ನು ಸಂಪರ್ಕಿಸಲು ಪ್ರಯತ್ನ ಪಟ್ಟರು. ಪಕ್ಷ ನನಗೆ ತಾಯಿ ಸಮಾನ. ಪ್ರಾಣ ಬಿಡುತ್ತೇನೆ. ಪಕ್ಷ ಬಿಡಲ್ಲ. ಪಕ್ಷದ ವ್ಯವಸ್ಥೆಯಿಂದ ದೂರ ಬರುವುದು ಅಷ್ಟು ಸುಲಭವಲ್ಲ. ನಾವು ಕಟ್ಟಿರೋ ಪಕ್ಷ ಇದು. ಬೇರೆಯವರು ಬಂದು ಈಗ ಸೇರಿರಬಹುದು ಎಂದು ಕಣ್ಣೀರಿಡುತ್ತ ರಾಮದಾಸ್ ಹೇಳಿದ್ದಾರೆ.
