ಹಾಸನ: ಜೆಡಿಎಸ್ ಗೆ ತಲೆ ನೋವಾಗಿರುವ ಹಾಸನ ಟಿಕೆಟ್ ಹಂಚಿಕೆ ಕಗ್ಗಂಟಿಗೆ ಎಚ್.ಡಿ ರೇವಣ್ಣ ಹೊಸ ತಂತ್ರ ರೂಪಿಸಿದ್ದಾರೆ. ಭವಾನಿಗೆ ಟಿಕೆಟ್ ನೀಡದಿದ್ದರೆ ಹಾಸನ, ಹೊಳೆ ನರಸೀಪುರ ಎರಡೂ ಕಡೆ ತನಗೇ ಟಿಕೆಟ್ ನೀಡಲು ಪಕ್ಷದ ವರಿಷ್ಠ ದೇವೆಗೌಡರ ಮುಂದೆ ಮತ್ತೊಂದು ದಾಳ ಉರುಳಿಸಿದ್ದಾರೆ. ಭವಾನಿಗೆ ಟಿಕೆಟ್ ಇಲ್ಲವಾದರೆ ತನಗೆ ಟಿಕೆಟ್ ನೀಡುವಂತೆ ರೇವಣ್ಣ ಪಟ್ಟು ಹಿಡಿದಿದ್ದಾರೆ.
ಇನ್ನೊಂದೆಡೆ ಪತ್ನಿ ಭವಾನಿ ರೇವಣ್ಣ ಇಮೇಜ್ ಹೆಚ್ಚಿಸಲು ಮುಂದಾದಂತಿದೆ. ಪತ್ನಿ ಮೇಲೆ ಸಾಫ್ಟ್ ಕಾರ್ನರ್ ಬಿಲ್ಡ್ ಮಾಡಲು ರೇವಣ್ಣ ಪ್ರಯತ್ನಿಸುತ್ತಿದ್ದಂತಿದೆ. ಪದೇ ಪದೇ ಭವಾನಿ ಭವಾನಿ ಎನ್ನುತ್ತಿರುವುದ್ಯಾಕೆ. ಎಲ್ಲದಕ್ಕೂ ಭವಾನಿ ರೇವಣ್ಣ ಎಳಿಬೇಡಿ ಎಂದಿದ್ದಾರೆ. ಪಕ್ಷದಲ್ಲಿ ದೇವೆಗೌಡರ ನಿರ್ಧಾರವೇ ಅಂತಿಮ ಎಂದು ಭವಾನಿ ಹೇಳಿದ್ದಾರೆ. ದೇವೆಗೌಡರ ನಿರ್ಧಾರಕ್ಕೆ ಬದ್ದ ಎಂದು ಸಂದೇಶ ರವಾನೆಯಾಗಿದೆ ಎಂದರು.
ರೇವಣ್ಣ ಈ ಹೇಳಿಕೆಯೆ ಹಿಂದಿದೆ ಅನೇಕ ಲೆಕ್ಕಾಚಾರ ಇದ್ದಂತಿದೆ. ಯಾಕಂದ್ರೆ ಈಗಾಗಲೇ ಕುಟುಂಬದಲ್ಲಿ ಭವಾನಿ ರೇವಣ್ಣ ವಿರುದ್ದ ಅಸಮಾಧಾನ ಶುರುವಾಗಿದೆ, ಇದಕ್ಕೆ ಭವಾನಿ ರೇವಣ್ಣನೇ ಕಾರಣ ಎಂದು ಆಂತರಿಕ ವಲಯದಲ್ಲಿ ಚರ್ಚೆ ಆಗ್ತಿದೆ. ಪಕ್ಷದ ಕಾರ್ಯಕರ್ತರಲ್ಲೂ ಗೊಂದಲ ಶುರುವಾದಂತಿದೆ.
ಭವಾನಿ ರೇವಣ್ಣರಿಂದ ಕುಮಾರಸ್ವಾಮಿ ಮತ್ತು ದೇವೆಗೌಡರಿಗೆ ಟೆನ್ಶನ್ ಎಂಬ ಗುಸುಗುಸು ಹರಿದಾಡಲಾರಂಭಿಸಿದೆ. ಕುಮಾರಸ್ವಾಮಿ ಪಂಚರತ್ನ ರಥಯಾತ್ರೆಗೆ ಭವಾನಿ ರೇವಣ್ಣರಿಂದಲೇ ಡ್ಯಾಮೇಜ್ ಎಂದು ಕೆಲ ಕಾರ್ಯಕರ್ತರು ಅಸಮಾಧಾನ ಹೊರ ಹಾಕಲಾರಂಭಿಸಿದ್ದಾರೆ. ಈ ಎಲ್ಲಾ ಕಾರಣಗಳಿಂದ ಅಸಮಾಧಾನ ಶಮನಕ್ಕೆ ಭವಾನಿ ರೇವಣ್ಣರನ್ನು ಎಳಿಬೇಡಿ ಎಂದ ಭವಾನಿ ರೇವಣ್ಣ ವಿಚಾರದಲ್ಲಿ ಡ್ಯಾಮೇಲ್ ಆಗದಂತೆ ತಡೆಯಲು ರೇವಣ್ಣ ಪ್ರಯತ್ನ ಪಡುತ್ತಿರುವ ಹಾಗೆ ಕಾಣುತ್ತಿದೆ.
