Saturday, April 25, 2026
Homeಟಾಪ್ ನ್ಯೂಸ್ಬೆಳಗಾವಿ: ಅಧಿಕಾರಿಗಳಿಂದ 1.50 ಕೋಟಿ ರೂ. ವಶ

ಬೆಳಗಾವಿ: ಅಧಿಕಾರಿಗಳಿಂದ 1.50 ಕೋಟಿ ರೂ. ವಶ

ಬೆಳಗಾವಿ: ರಾಮದುರ್ಗದಲ್ಲಿ ಅಕ್ರಮವಾಗಿ ಕಾರಿನಲ್ಲಿ ಸಾಗಿಸುತ್ತಿದ್ದ 1.50 ಕೋಟಿ ಹಣವನ್ನ ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ.

ವಿಧಾನಸಭೆ ಚುನಾವಣೆಗೆ ಕೆಲವೆ ದಿನಗಳು ಬಾಕಿಯಿದ್ದು, ಮತದಾರರಿಗೆ ಆಮಿಷಗಳನ್ನೊಡ್ಡಿ ಹೇಗಾದರೂ ಮಾಡಿ ಗೆಲ್ಲಬೇಕೆಂಬ ಉದ್ದೇಶದಿಂದ ಉಭಯ ಪಕ್ಷಗಳು ಹರಸಾಹಸ ನಡೆಸುತ್ತಿವೆ. ಇನ್ನೊಂದೆಡೆ ಇಂತಹ ಅಕ್ರಮಗಳನ್ನ ತಡೆಯಲು ರಾಜ್ಯಾದ್ಯಂತ ಚೆಕ್​ಪೋಸ್ಟ್​ಗಳನ್ನ ನಿರ್ಮಿಸಲಾಗಿದೆ. ಅದರಂತೆ ಇದೀಗ ಜಿಲ್ಲೆಯ ರಾಮದುರ್ಗದಲ್ಲಿ ಅಕ್ರಮವಾಗಿ ಕಾರಿನಲ್ಲಿ ಸಾಗಿಸುತ್ತಿದ್ದ 1.50 ಕೋಟಿ ಹಣವನ್ನ ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ.

ತಾಲೂಕಿನ ತುರನೂರು ಬಳಿ ಬಿಜೆಪಿ ಅಭ್ಯರ್ಥಿ ಚಿಕ್ಕರೇವಣ್ಣ ಬೆಂಬಲಿಗರಿಂದ ಹಣ ಹಂಚಿಕೆ ಆರೋಪ ಕೇಳಿಬಂದಿದ್ದು, ಹಣ ಹಂಚಿಕೆ ಮಾಡುತ್ತಿದ್ದ ದೃಶ್ಯ ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗಿತ್ತು. ಈ ಹಿನ್ನೆಲೆ ರಾಮದುರ್ಗ ಠಾಣೆ ಪೊಲೀಸರು ಖಚಿತ ಮಾಹಿತಿ ಮೇರೆಗೆ ತಡರಾತ್ರಿ ದಾಳಿ ನಡೆಸಿ, ಕಾರಿನಲ್ಲಿ ಸಾಗಿಸುತ್ತಿದ್ದ ಅಕ್ರಮ ಹಣವನ್ನ ವಶಕ್ಕೆ ಪಡೆದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಹಣವನ್ನ ಹಸ್ತಾಂತರ ಮಾಡಿದ್ದಾರೆ.

ಹೆಚ್ಚಿನ ಸುದ್ದಿ