ನವದೆಹಲಿ: ವರುಣಾ ಹಾಗೂ ಕೋಲಾರ- ಈ ಎರಡೂ ಕ್ಷೇತ್ರದಿಂದ ಸ್ಪರ್ಧಿಸಲು ಚಿಂತಿಸಿರುವ ಸಿದ್ದರಾಮಯ್ಯ ಈ ವಿಚಾರವಾಗಿ ಇಂದು ದೆಹಲಿಯಲ್ಲಿ ರಾಹುಲ್ ಗಾಂಧಿಯವರನ್ನು ಭೇಟಿಯಾಗಿದ್ದಾರೆ
ಕಾಂಗ್ರೆಸ್ ಮೊದಲ ಪಟ್ಟಿಯಲ್ಲೇ ವರುಣಾ ಕ್ಷೇತ್ರಕ್ಕೆ ಸಿದ್ದರಾಮ್ಯ ಹೆಸರು ಘೋಷಣೆ ಮಾಡಿಯಾಗಿದೆ. ಅಭ್ಯರ್ಥಿ ಘೋಷಣೆಗೂ ಮುನ್ನಾ ಬಾದಾಮಿ ಕ್ಷೇತ್ರ ಬಿಟ್ಟು ಬೇರೆ ಯಾವ ಕ್ಷೇತ್ರ ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲದಲ್ಲಿದ್ದ ಸಿದ್ದರಾಮಯ್ಯ, ವರುಣಾ,ಕೋಲಾರ, ಕಡೂರು, ಕುಷ್ಟಗಿ ಸೇರಿದಂತೆ ಹಲವು ಸೇಫ್ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ರು. ಯಾವ ಕ್ಷೇತ್ರದಿಂದ ಸ್ಪರ್ಧಿಸಿದ್ರೆ ಸೇಫ್ ಎಂದು ಲೆಕ್ಕಾಚಾರ ಮಾಡಿದ್ದ ಸಿದ್ದರಾಮಯ್ಯ ಇನ್ನೇನು ಕೋಲಾರದಲ್ಲೇ ನಿಲ್ಲೋದು ಖಚಿತ ಎನ್ನಲಾಗಿತ್ತು.
ಇದೀಗ ವರುಣಾದಿಂದ ಅಧಿಕೃತ ಅಭ್ಯರ್ಥಿಯಾಗಿ ಸಿದ್ದರಾಮಯ್ಯ ಹೆಸರು ಘೋಷಣೆಯಾದ ಮೇಲೆ ಕೋಲಾರ ಕ್ಷೇತ್ರದ ಕಾರ್ಯಕರ್ತರ ಒತ್ತಾಯ ಹಾಗೂ ಒಂದು ವೇಳೆ ವರುಣಾ ಕೈಕೊಟ್ಟರೆ ಕೋಲಾರ ಕ್ಷೇತ್ರ ಕೈಹಿಡಿಯಬಹುದು ಎಂಬ ಲೆಕ್ಕಾಚಾರದ ಮೇಲೆ ಕೋಲಾರದಿಂದಲೂ ಟಿಕೆಟ್ ಕೇಳುತ್ತಿರುವ ಸಿದ್ದರಾಮಯ್ಯ ಇಂದು ರಾಹುಲ್ ಗಾಂಧಿ ಬೇಟಿಯಾಗಿ ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ
