Wednesday, June 17, 2026
Homeರಾಜ್ಯಅಪ್ಪಾಜಿ ನಾಡಗೌಡ ಅವರಿಗೆ ಸಚಿವಸ್ಥಾನಕ್ಕೆ ಆಗ್ರಹಿಸಿ ಮುದ್ದೇಬಿಹಾಳ ಶುಕ್ರವಾರ ಬಂದ್‌ ಕರೆ...!!! ವಿವಿಧ ಸಂಘ ಸಂಸ್ಥೆಗಳ...

ಅಪ್ಪಾಜಿ ನಾಡಗೌಡ ಅವರಿಗೆ ಸಚಿವಸ್ಥಾನಕ್ಕೆ ಆಗ್ರಹಿಸಿ ಮುದ್ದೇಬಿಹಾಳ ಶುಕ್ರವಾರ ಬಂದ್‌ ಕರೆ…!!! ವಿವಿಧ ಸಂಘ ಸಂಸ್ಥೆಗಳ ಬೆಂಬಲ..!!!

ಮುದ್ದೇಬಿಹಾಳ:
ಮುದ್ದೇಬಿಹಾಳ ಮತಕ್ಷೇತ್ರದ ಶಾಸಕಾದ ಸಿ ಎಸ್ ನಾಡಗೌಡ(ಅಪ್ಪಾಜಿ) ಅವರನ್ನು ಈ ಬಾರಿ ಎರಡನೆ ಅವಧಿಯ ಸರಕಾರ ರಚನೆಯ ಮಂತ್ರಿಮಂಡಲ್ಲಿ ಕ್ಯಾಬಿನೇಟ್‌ ದರ್ಜೇಯ ಸಚಿವಸ್ಥಾನ ನೀಡಬೇಕು ಎಂದು ಆಗ್ರಹಿಸಿ ದಿ,19 ಶುಕ್ರವಾರದಂದು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಮುದ್ದೇಬಿಹಾಳ ಒಂದು ದಿನ ಬಂದಕರೆ ನೀಡಲಾಗಿದೆ
. ಕಾರಣ ಪಟ್ಟಣದ ಎಲ್ಲ ಸಂಘ ಸಂಸ್ಥೆಯ ಮುಖ್ಯಸ್ಥರು ಕಾರ್ಯಕರ್ತರು, ಸಾಹಿತಿಗಳು, ಕಾಂಗ್ರೇಸ್‌ ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ ಯಶಸ್ವಿಗೊಳಿಸಬೇಕು ಎಂದುತಾಲೂಕಾ ಬ್ಲಾಕ್‌ಕಾಂಗ್ರೇಸ್‌ಅಧ್ಯಕ್ಷಗುರು ತಾರನಾಳ ಹೇಳಿದರು.
ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಶಾಸಕ ಸಿ ಎಸ್ ನಾಡಗೌಡ(ಅಪ್ಪಾಜಿ) ಅವರ ಗೃಹ ಕಚೇರಿಯಲ್ಲಿ ನಡೆದ ವಿವಿದ ಸಂಘ ಸಂಸ್ಥೆಗಳ ಹಾಗೂ ವಿವಿಧ ವ್ಯಾಪಾರಸ್ಥರು ಗಣ್ಯರ ಸಭೆಯಲ್ಲಿಅವರು ಮಾತನಾಡಿದರು.


ಶಾಸಕ ಸಿ ಎಸ್ ನಾಡಗೌಡರು ಕಳೇದ 45 ವರ್ಷಗಳ ಸುದೀರ್ಘ ಪಕ್ಷ ನಿಷ್ಟರಾಗಿ ಆರು ಬಾರಿ ಶಾಸಕರಾಗಿ ಶರಣತ್ವ ಸಿದ್ದಾಂತದಲ್ಲಿ ಉತ್ತಮ ಸನ್ನಡತೆ ಹೊಂದಿದ ಹಿರಿಯ ರಾಜಕಾರಣಿಯಾಗಿ ಬೆಳೆದು ಬಂದವರು. ಕಾಂಗ್ರೇಸ್ ಸರಕಾರದರಚನೆಯಲ್ಲಿ ಪ್ರತಿ ಬಾರಿಯೂ ಹಿರಿಯರ ಸಾಲಿನ ಸಚಿವಸ್ಥಾನದಲ್ಲಿಅಪ್ಪಾಜಿ ನಾಡಗೌಡರ ಹೆಸರು ಮುಂಚುಣಿಗೆ ಬರುತ್ತದೆ ಇನ್ನೇನು ಪ್ರಮಾಣ ವಚನ ಸ್ವೀಕರಿಸುವ ಸಚಿವರ ಪಟ್ಟಿಯಿಂದ ಕೈಬಿಟ್ಟು ಬೇರೆಯವರನ್ನುಆಯ್ಕೆ ಮಾಡುತ್ತಲೆ ಅಪಮಾನಿಸಲಾಗುತ್ತಿದೆ. ಅದರಂತೆ ಕಳೆದ 2023ರ ಪ್ರಸ್ತುತಕಾಂಗ್ರೇಸ್ ಸರಕಾರದ ಅವಧಿಯಲ್ಲೂಕೂಡ ನಾಡಗೌಡರನ್ನು ಮಂತ್ರಿಯನ್ನಾಗಿ ಮಾಡದೇ ಅಪಮಾನಿಸಲಾಯಿತು. ಇದು ಬರಿ ಶಾಸಕ ಅಪ್ಪಾಜಿ ನಾಡಗೌಡರಿಗೆ ಅಪಮಾನವಲ್ಲಇಡಿ ಮತಕ್ಷೇತ್ರದ ಕಾಂಗ್ರೇಸ್ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ, ಜನತೆಗೆ ಅಪಮಾನಿಸಿದಂತಾಗಿದೆ.
ಆದರೇ ಈ ಬಾರಿ ಎರಡನೆಅವಧಿಯಲ್ಲಿ ನಮ್ಮ ಕಾಂಗ್ರೇಸ್ ಪಕ್ಷದಕೇಂದ್ರದ ಹಾಗೂ ರಾಜ್ಯದ ವರಿಷ್ಠರು ಈ ವಿಷಯವನ್ನುಗಂಬೀರವಾಗಿ ಪರಿಗಣಿಸುವ ಮೂಲಕ ಅಪ್ಪಾಜಿ ನಾಡಗೌಡರನ್ನುಉತ್ತಮದರ್ಜೇಯ ಸಚಿವಸ್ಥಾನ ನೀಡಿಗೌರವಿಸಬೇಕು ಇಲ್ಲವಾದರೇ ಮತಕ್ಷೇತ್ರದ ಎಲ್ಲ ಕಾಂಗ್ರೇಸ್ ಪಕ್ಷದ ಮುಖಂಡರುಕಾರ್ಯಕರ್ತರು ಸಾಮೂಹಿಕ ರಾಜಿನಾಮೆ ನೀಡಬೇಕಾಗುತ್ತದೆ ಎಂಬುದು ಹಕ್ಕೋತ್ತಯದ ಮೂಲಕ ಒಂದು ದಿನದ ಸಾಂಕೇತಿಕ ಮುದ್ದೇಬಿಹಾಳ ಬಂದಕರೆ ನೀಡುವುದರ ಜತೆಗೆ ಪ್ರತಿಭಟನೆ ನಡೆಸಿ ತಹಶಿಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದುಎಂದರು.
ಈ ಸಂದಂರ್ಭದಲ್ಲಿ ಶಿವಶಂಕಂರಗೌಡ ಹಿರೇಗೌಡರವರು ಮಾತನಾಡಿ, ಅಪ್ಪಾಜಿ ನಾಡಗೌಡರು ಒಬ್ಬ ಸಭ್ಯಸ್ಥ ತಮ್ಮ ರಾಜಕೀಯ ಜೀವನದಲ್ಲಿ ಒಂದೂ ಕಪ್ಪು ಚುಕ್ಕೆಯಿಲ್ಲದೇ ಮಾದರಿಯಾಗಿ ರಾಜಕಾರಣದಲ್ಲಿ ತೊಡಗಿಸಿಕೊಂಡವರು. ಇವರನ್ನು ಪಕ್ಷ ಯಾವಾಗಲೋ ಗುರ್ತಿಸಬೇಕಾಗಿತ್ತು. ಇವರ ಸೌಮ್ಯ ಸ್ವಭಾವಕ್ಕೋ ಅಥವಾ ಪಕ್ಷ ನಿಷ್ಟೆ ತೊರಿದ್ದಕ್ಕೋ ಇವರನ್ನು ಸ್ಥಾನ ಮಾನ ನೀಡುವಲ್ಲಿ ಹಿಂದೇಟು ಹಾಕುತ್ತಿದೆಯೋ ಏನೋ ಗೊತ್ತಿಲ್ಲ ಕಾಂಗ್ರೇಸ್ ವರಿಷ್ಠರು ಈ ಬಾರಿಅಪ್ಪಾಜಿ ನಾಡಗೌಡರನ್ನು ಸಚಿವ ಸ್ಥಾನ ನೀಡಿಗೌರವಿಸಲೇ ಬೇಕು ಇದು ಮತಕ್ಷೇತ್ರದ ಎಲ್ಲ ಜನರ ಪರವಾಗಿ ಒತ್ತಾಯಿಸುತ್ತೇನೆ ಈ ನಿಟ್ಟಿನಲ್ಲಿ ಶುಕ್ರವಾರ ಹಮ್ಮಿಕೊಂಡಿರುವ ಮುದ್ದೇಬಿಹಾಳ ಬಂದಕರೆ ಹಾಗೂ ಪ್ರತಿಭಟನೆಗೆ ತಾಲೂಕಿನ ಎಲ್ಲ ಬೀಜ ಹಾಗೂ ರಸಗೊಬ್ಬರ, ಆಗ್ರೋ ಫರ್ಟಿಲೈಜರ್ ಸಂಘವು ಸಂಪೂರ್ಣ ಬೆಂಬಲಿಸುವ ಮೂಲಕ ಮನವಿ ಮಾಡಿಕೊಳ್ಳುತ್ತೇನೆ ಎಂದರು.
ಎಪಿಎಂಸಿ ಸಿ.ಎಲ್.ಬಿರಾದಾರ ಹಾಗೂ ಬಿ.ಪಿ. ಮೂರಾಳ ಅವರು ಮಾತನಾಡಿ ಸೌಮ್ಯರಾಜಕಾರಣಿ ಶಾಸಕ ಅಪ್ಪಾಜಿ ನಾಡಗೌಡ ಅವರನ್ನು ಈ ಬಾರಿ ಸಚಿವಸ್ಥಾನ ನೀಡಬೇಕು ಎಂದು ಆಗ್ರಹಿಸಿ ತಾಲೂಕಿನ ಎಲ್ಲ ಮುಖಂಡರು ನಡೆಸುತ್ತಿರುವ ಮುದ್ದೇಬಿಹಾಳ ಬಂದಕರೆ ಹಾಗೂ ಪ್ರತಿಭಟನೆ ಮುದ್ದೇಬಿಹಾಳ ಎಪಿಎಂಸಿ ವರ್ತಕರ ಸಂಘವೂ ಸಂಪೂರ್ಣ ಬೆಂಬಲವಿದೆ ಎಂದರು.
ಈ ಸಂದರ್ಭದಲ್ಲಿ ಪಟ್ಟಣದ ಗಣ್ಯ ವ್ಯಾಪಾರಸ್ಥರಾದ ರಮೇಶ ಓಸ್ವಾಲ, ಎಂ.ಬಿ.ನಾವದಗಿ, ಗಫೂರಸಾಬ ಮಕಾಂದಾರ, ಬಿ.ಕೆ.ಬಿರಾದಾರ, ಎಚ್.ಟಿ. ಬಿರಾದಾರ, ಪ್ರಭುರಾಜ ಕಲಬುರ್ಗಿ, ಅಮರೇಶ ಗೂಳಿ, ಸಂಗಣ್ಣ ಮೇಲಿಮನಿ, ಸದು ಮಠ, ಎ ಗಣೇಶ ಅನ್ನಗೋನಿ, ಬಾಪುಗೌಡ ಪಿರಾಪೂರ, ಸುರೇಶ ಪಾಟೀಲ, ಸಂಗನಗೌಡ ಪಾಟೀಲ, ಶರಣು ಚಲವಾದಿ, ತಿಪ್ಪಣ್ಣ ದೊಡಮನಿ, ನೇತಾಜಿ ನಲವಡೆ, ರವಿ ಗೂಳಿ, ವಿರುಪಾಕ್ಷಿ ಪತ್ತಾರ, ಜಗಧೀಶ ಕಂಠಿ, ಅಪ್ಪು ದೇಗಿನಾಳ, ಸಂಗನಗೌಡ ಬಿರಾದಾರ(ಜಿಟಿಸಿ), ಸಿಕಂದರ ಜಾನ್ವೇಕರ, ಪಿಂಟು ಸಾಲಿಮನಿ, ವಾಯ್‌.ಎಚ್.ವಿಜಯಕರ, ಲಕ್ಷಣ್ಮ ಲಮಾಣಿ, ಹಣಮಂತ ಕುರಿ, ಬಸವರಾಜ ಚಿನಿವಾರ, ಅಶೋಕ ಚೇಟ್ಟೆರ, ವೆಂಕನಗೌಡ ಪಾಟೀಲ, ಅಕ್ಷತಾ ಚಲವಾದಿ, ಸರಸ್ವತಿ ಪಿರಾಪೂರ, ಸುಜಾತಾ ಶಿಂಧೆ, ನೀಲಮ್ಮ ಚಲವಾದಿ, ಮಾಬೂಬಿ ಬಾಗವಾನ ಇದ್ದರು.

ಹೆಚ್ಚಿನ ಸುದ್ದಿ