ಮುದ್ದೇಬಿಹಾಳ 17:
ಕನ್ನಡ ಅಭಿಮಾನವನ್ನು ಸಾಮಾನ್ಯರು ನಾನಾ ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ. ಆದರೆ ಓರ್ವ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ತನ್ನ ವೇತನದಲ್ಲಿ ಸರಕಾರಿ ಬಸ್ಸಿಗೆ ಸುಂದರವಾಗಿ ಹೂಗಳಿಂದ ಅಲಂಕರಿಸಿ ಒಂದು ತಿಂಗಳು ಉತ್ತರ ಕರ್ನಾಟಕದ ಎಲ್ಲಾ ಭಾಗದ ನಗರಗಳಲ್ಲಿ ಸಂಚರಿಸಿ ಕನ್ನಡ ಭಾಷಡಯ ಅಭಿಮಾನವನ್ನು ಎಲ್ಲರಲ್ಲೂ ಉತ್ತೇಜಿಸುತ್ತಿದ್ದಾರೆ.
ಹೌದು, ಹಾವೇರಿ ಜಿಲ್ಲೆಯ ಹಿರೇಕೆರೂರ ಪಟ್ಟಣದ ಸಾರಿಗೆ ಘಟಕದ ಚಾಲಕ ಪರಶುರಾಮ ಭೋವಿ ಹಾಗೂ ನಿರ್ವಾಹಕ ಶಶಿಕುಮಾರ ಬೋಸ್ತೆ ತಮ್ಮ ತಿಂಗಳ ವೇತನದಲ್ಲಿಯೇ ಪ್ರತಿ ವರ್ಷ ನವೆಂಬರ ತಿಂಗಳಲ್ಲಿ ಬರುವ ಕನ್ನಡ ರಾಜ್ಯೋತ್ಸವ ನಿಮಿತ್ಯವಾಗಿ ತಾವು ಚಲಾಯಿಸುವ ಬಸ್ಸಿ ಹೂಗಳಿಂದ ಸಿಂಗರಿಸಿ ಕನ್ನಡ ನಾಡಿನ ಹಿರಿಮೆಯನ್ನು ಪ್ರತಿಯೊಬ್ಬರಿಗೂ ತಿಳಿಸುವ ಕಾರ್ಯದಲ್ಲಿ ಕಳೆದ 6 ವರ್ಷದಿಂದ ತೊಡಗಿದ್ದಾರೆ. ಪ್ರತಿ ವರ್ಷ ಕನ್ನಡ ರಾಜ್ಯೋತ್ಸವದಿಂದ ಒಂದು ತಿಂಗಳವರೆಗೂ ರಾಜ್ಯದ ವಿವಿದ ಜಿಲ್ಲೆಗಳಲ್ಲಿ ಸಂಚರಿಸಿ ಕನ್ನಡಾಭಿಮಾನವನ್ನು ಮೂಡಿಸುವ ಪರಶುರಾಮ ಅವರಿಗೆ ಜೊತೆಯಾಗಿ ಕಾರ್ಯನಿರ್ವಾಹಕ ಶಶಿಕುಮಾರ ಭೋಸಲೆ ಅವರು ಕೈಜೋಡಿಸಿದ್ದಾರೆ.
ಸಾರಿಗೆ ಇಲಾಖೆ ಗುರುತಿಸುವಂತಾಗಲಿ:
ರಾಜ್ಯ ಸಾರಿಗೆ ಇಲಾಖೆಯಲ್ಲಿ ಕನ್ನಡಾಭಿಮಾನವನ್ನು ತೋಡಿಸುವಲ್ಲಿ ನಿರತರಾಗಿರುವ ಪರಶುರಾಮ ಹಾಗೂ ಶಶಿಕುಮಾರ ಅವರಂತಹ ಕಾರ್ಮಿಕರನ್ನು ರಾಜ್ಯ ಸರಕಾರ ಗುರುತಿಸುವುದು ಅವಶ್ಯಕವಾಗಿದೆ. ಇಂತಹ ಕಾರ್ಮಿಕರಿಂದ ಮಾತ್ರ ಕನ್ನಡಾಭಿಮಾನವನ್ನು ರಾಜ್ಯದಲ್ಲಿ ನೆಲೆಸಿರುವ ನೆರೆ ರಾಜ್ಯದ ಜನರಲ್ಲಿ ಮೂಡಿಸಬಹುದಾಗಿದೆ.
ಕನ್ನಡಪರ ಸಂಘಟಿತರು ಗುರುತಿಸಲಿ:
ರಾಜ್ಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ, ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಹೆಸರಿನಡಿ ಸಾಕಷ್ಟು ಕನ್ನಡ ಸಂಘಟನೆಗಳು ತಲೆ ಎತ್ತಿಕೊಂಡಿವೆ. ಆದರೆ ಕನ್ನಡ ಪರವಾಗಿ ಅಭಿಮಾನವನ್ನು ವ್ಯಕ್ತಪಡಿಸುವ ವ್ಯಕ್ತಿಗಳನ್ನು ಗುರುತಿಸುವಲ್ಲಿ ಯಾವುದೇ ಸಂಘಟನೆ ಮುಂದಾಗುತ್ತಿಲ್ಲ. ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಸರಕಾರಿ ಅಧಿಕಾರಿಗಳಿದ್ದು ಅವರು ತಮ್ಮ ಸ್ವಂತ ಹಣದಲ್ಲಿ ಕನ್ನಡದ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದು ಇಂತಹ ಜನರನ್ನು ಗುರುತಿಸಿ ಅವರಿಗೆ ಸತ್ಕಾರ ಮಾಡುವಲ್ಲಿ ಕನ್ನಡ ಪರ ಸಂಘಟನೆಗಳು ಮುಂದಾಗಬೇಕು ಎಂದು ಸಮಾಜ ಸೇವಕ ಯುವಕರ ಕಣ್ಮನಿ ಶಾಂತಗೌಡ ಪಾಟೀಲ ನಡಹಳ್ಳಿ ಹೇಳಿದ್ದಾರೆ.
ಸಾರಿಗೆ ಬಸ್ಸಿಗೆ ವಿವಿಧ ಅಲಂಕಾರ:
ಸಾರಿಗೆ ಬಸ್ಸಿನ ಮುಂಬಾಗದಲ್ಲಿ ಕನ್ನಡಾಂಭೆಯ ಮೂರ್ತಿಯನ್ನು ಪ್ರತಿಷ್ಠಾಪಿಸಿದ ಚಾಲಕ ಪರಶುರಾಮ ಹಾಗೂ ನಿರ್ವಾಹಕ ಶಶಿಧರ ಬಸ್ಸಿನ ಒಳಭಾಗದಲ್ಲಿ ಹಾಗೂ ಹೊರಭಾಗದಲ್ಲಿ ಕನ್ನಡ ಭಾಷೆಯ ಸಂತ ಸಾಹಿತ್ಯರ ಭಾವಚಿತ್ರಗಳ ಜೊತೆಗೆ ನಾಡಿದ ಧ್ವಜದಿಂದ ಅಲಂಕರಿಸಿ ಎಲ್ಲರ ಕಂಗೊಳಿಸುವಂತೆ ಮಾಡಿದ್ದು ವಿಶೆಷವಾಗಿತ್ತು.
ಜನರಿಂದ ವಿಶೇಷ ಪೂಜೆ:
ಕನ್ನಡಾಭಿಮಾನವನ್ನು ತೋರುವ ಬಸ್ಸು ಮುದ್ದೇಬಿಹಾಳ ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ತಾಳಿಕೋಟಿ ರೋಡಿನ ರಿಲಾಯ್ಸಿನ್ ಪಂಪ್ ಹತ್ತಿರ ಮಹಿಳೆಯರು ಹಾಗೂ ಯುವಕರು ಸ್ವಾಗತಕ್ಕೆ ನಿಂತು. ಬಸ್ಸಿನ ಚಾಲಕ ಹಾಗೂ ನಿರ್ವಾಹಕರಿಗೆ ವಿಶೇಷವಾಗಿ ಸನ್ಮಾನಿಸಿ ಅಲಂಕಾರಗೊಂಡ ಬಸ್ಸಿಗೆ ವಿಶೇಷ ಆರತಿ ಮಾಡುವ ಮೂಲಕ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಬಸವರಾಜ ಮುರಾಳ, ಮಾಜಿ ಸೈನಿಕ ಪ್ರಮೋದ ಕೆಡೆದ, ವಿಜಯಕುಮಾರ ಮುರಾಳ, ರಾವಜಪ್ಪ ದೇಸಾಯಿ, ಮಹೇಶ ಬಿರಾದಾರ, ಮುತ್ತು ಬಂಗಾರಿ, ಶರಣಗೌಡ ಸಾಲವಾಡಗಿ, ಸಂಗು ಸಾಹುಕಾರ ಅಂಗಡಿ, ವಿನೋದ ಯರಗಲ್ಲ ಇದ್ದರು.
