
ಹನಮಸಾಗರ ಸಮೀಪದ ತುಮರಿಕೊಪ್ಪ ಕ್ರಾಸ್ ಹತ್ತಿರ ಗಜೇಂದ್ರಗಡ ಗುಡೂರು ಮುಖ್ಯ ರಸ್ತೆ ಹದಗೆಟ್ಟ ಸಂಚಾರಕ್ಕೆಅಸ್ತವ್ಯಸ್ತವಾಗಿದೆ ಸುಮಾರ ಎರಡು ಮೂರು ವರ್ಷಗಳಿಂದ ರಸ್ತ ಹದಗೆಟ್ಟಿದ್ದು ನಿತ್ಯ ವಾಹನ ಸಂಚರಿಸಲು ಹರಸಾಹಸಪಡುವಂತಾಗಿದೆ ಎಂದು ಸ್ಥಳೀಯರು ಅಕ್ರೋಶ ವ್ಯಕ್ತ ಪಡಿಸಿದ್ದಾರೆ

ರೈತ ಶಿವಪ್ಪ ಮಾದರ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಜನಪ್ರತಿನಿಧಿಗಳು ನಿಮಗೆ ಉತ್ತಮ ಗುಣಮಟ್ಟದ ರಸ್ತೆಗಳನ್ನು ಮಾಡಿಸಿಕೊಡುತ್ತೇವೆ ಎಂದು ಭರವಸೆ ನೀಡುತ್ತಾರೆ. ಒಮ್ಮೆ ಗೆದ್ದು ಬಂದ ಮೇಲೆ ಈ ಕಡೆ ಮತ್ತೆ ವಾಪಸ್ ಬರುವುದಿಲ್ಲ. ಇನ್ನಾದರೂ ಜನಪ್ರತಿನಿಧಿಗಳು ಸರ್ಕಾರದಿಂದ ಅನುದಾನ ತಂದು ಜನರಿಗೆ ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸಿಕೊಡಲಿ ಎಂದರು.ಈ ಮಾರ್ಗದ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ತಪ್ಪಿದ್ದಲ್ಲ. ರಸ್ತೆಯಲ್ಲಿ ಸಾಕಷ್ಟು ಗುಂಡಿಗಳಿವೆ. ಇದು ದ್ವಿಚಕ್ರ ಸೇರಿದಂತೆ ಆಟೊ, ಕಾರು, ಸೈಕಲ್, ಟ್ರ್ಯಾಕ್ಟರ್ ಸೇರಿದಂತೆ ಹಲವು ವಾಹನಗಳ ಸವಾರರಿಗೆ ನುಂಗಲಾರದ ತುತ್ತಾಗಿದೆ. ಮಳೆ ಬಂದರಂತೂ ವಾಹನ ಸವಾರರ ಪಾಡು ದೇವರಿಗೆ ಪ್ರೀತಿ ಎಂಬಂತಾಗುತ್ತದೆ. ಎನ್ನುತ್ತಾರೆ ರಸ್ತೆಯಲ್ಲಿ ಪ್ರಯಾಣಿಕರು
ವರದಿ ಯಮನೂರಪ್ಪ ಆರ್ ಅಬ್ಬಿಗೇರಿ
