Tuesday, April 14, 2026
HomeUncategorized“ಬಗ‌ರ್ ಹುಕುಂ ಜಮೀನು ಸಕ್ರಮಗೊಳಿಸಿ'

“ಬಗ‌ರ್ ಹುಕುಂ ಜಮೀನು ಸಕ್ರಮಗೊಳಿಸಿ’

ಸಿಂದಗಿ: ತಾಲ್ಲೂಕಿನ ಗೋಲಗೇರಿ ಗ್ರಾಮ ಢವಳಾರ ಪಂಚಾಯಿತಿ ವ್ಯಾಪ್ತಿಯ ಮತ್ತು ಸಾಸಾಬಾಳ ಗ್ರಾಮದ ಜಮೀನುಗಳಲ್ಲಿ ಬಗರ್ ಹುಕುಂ ಸಾಗುವಳಿ ಮಾಡುವ ರೈತರಿಗೆ ಜಮೀನುಗಳನ್ನು ಸಕ್ರಮಗೊಳಿಸಿ ಹಕ್ಕುಪತ್ರ ವಿತರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ತಾಲ್ಲೂಕು ಸಮಿತಿ ಪದಾಧಿಕಾರಿಗಳು ಸೋಮವಾರ ಇಲ್ಲಿಯ ತಾಲ್ಲೂಕು ಪ್ರಜಾಸೌಧ ಎದುರು ಗ್ರೇಡ್ 2 ತಹಶೀಲ್ದಾರ್ ಇಂದಿರಾಬಾಯಿ ಬಳಗಾನೂರ ಅವರಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಣ್ಣಾರಾಯ ಈಳಗೇರ ಮಾತನಾಡಿ, 20 ವರ್ಷಗಳಿಂದ ಭೂಮಿ ಸಾಗುವಳಿ

ಸಿಂದಗಿ ಪಟ್ಟಣದ ತಾಲ್ಲೂಕು ಪ್ರಜಾಸೌಧ ಎದುರು ಸೋಮವಾರ ಕರ್ನಾಟಕ ಪ್ರಾಂತ ರೈತ ಸಂಘ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಪದಾಧಿಕಾರಿಗಳು ಗ್ರೇಡ್2 ತಹಶೀಲ್ದಾರ್ ಇಂದಿರಾಬಾಯಿ ಬಳಗಾನೂರ ಅವರಿಗೆ ಮನವಿ ಸಲ್ಲಿಸಿದರು

ಮಾಡಿಕೊಂಡು ಬಂದಿರುವ ಕೂಡಲೇ ಹಕ್ಕುಪತ್ರ ವಿತರಣೆ ರೈತರು ನಮೂನೆ 57ರಲ್ಲಿ ಮಾಡದಿದ್ದರೆ ಉಗ್ರ ಹೋರಾಟ ಅರ್ಜಿ ಸಲ್ಲಿಸಿ ಹಕ್ಕುಪತ್ರಗಳಿಗಾಗಿ ಕಾಯುತ್ತ ಕುಳಿತಿದ್ದಾರೆ ಈ ರೈತರಿಗೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮುಖ್ಯಾಂಶಗಳು
•ಹಕ್ಕುಪತ್ರಗಳಿಗೆ ಕಾದು ಕುಳಿತಿರುವ ರೈತರು
•ಮನವಿಗೆ ಸ್ಪಂದಿಸದಿದ್ದರೆ ಹೋರಾಟದ ಎಚ್ಚರಿಕೆ

ಡಿವೈಎಫ್‌ಐ ತಾಲ್ಲೂಕು ಸಮಿತಿ ಅಧ್ಯಕ್ಷ ರಮೇಶ ಸಾಸಾಬಾಳ, ರುಕ್ಕುದ್ದೀನ ಹಳಿಮನಿ ಗೋಲಗೇರಿ, ಅನೀಲ ಭಜಂತ್ರಿ, ಅಶೋಕ ಹಡಪದ, ನಿಂಗಪ್ಪ ವಡಗೇರಿ, ಸೋಮಪ್ಪ ಹರಿಜನ, ತವರು ರಾಠೋಡ, ಭೀಮಶ್ಯಾ ಪವಾರ, ಲಕ್ಷ್ಮೀಬಾಯಿ ರಾಠೋಡ, ಕಸ್ತೂರಿಬಾಯಿ ಚವ್ಹಾಣ, ಯಲ್ಲಪ್ಪ ತಳವಾರ ಇದ್ದರು.

ಹೆಚ್ಚಿನ ಸುದ್ದಿ